ಕೇರಳದಲ್ಲಿ ಸಹೋದರನಿಂದಲೇ ಸಹೋದರಿಯ ಹತ್ಯೆ!
Update: 2016-05-09 13:25 IST
ಪುನಲೂರ್,ಮೇ 9: ಇಂದು ಬೆಳಗ್ಗೆ ಕೊಲ್ಲಂ ಜಿಲ್ಲೆಯ ಪುನಲೂರಿನ್ ಸಮೀಪದ ನರಿಕಲ್ಲಿ ಎಂಬಲ್ಲಿ ಸಹೋದರನೊಬ್ಬ ತನ್ನದೇ ಸಹೋದರಿಯ ಕತ್ತನ್ನು ಕತ್ತರಿಸಿ ಕೊಲೆಗೈದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಹೋದರನಿಂದಾಗಿ ವಟ್ಟಮ್ಮಾಳ್ ಕಲ್ಲು ವಿಳ ಪುತ್ತನ್ ವೀಟ್ ಮೇರ್ಸಿತ್ ಥಾಮಸ್(45) ಎಂಬ ಮಹಿಳೆ ಹತ್ಯೆಯಾಗಿದ್ದು ಆಕೆಯನ್ನು ಕೊಂದ ಬಳಿಕ ಸಹೋದರ ಡಾನಿಯಲ್ ಸ್ವಯಂ ಬೆಂಕಿಇಟ್ಟು ಆತ್ಮಹತ್ಯೆಗೆ ಶ್ರಮಿಸಿದ್ದಾನೆ. ಗಂಭೀರ ಸುಟ್ಟ ಗಾಯಗಳೊಂದಿಗೆ ಆತನ್ನು ತಿರುವನಂತಪುರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆರ್ಸಿತ್ ಮತ್ತು ಡಾನಿಯಲ್ ಥಾಮಸ್ ಇಬ್ಬರಿಗೂ ಮದುವೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಇಂದು ಬೆಳಗ್ಗೆ ಘಟನೆ ನಡೆದಿದ್ದು ಕುಟುಂಬ ಕಲಹ ಕೊಲೆಪಾತಕಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಮೆರ್ಸಿತ್ ಮಾನಸಿಕ ಅಸ್ವಸ್ಥೆಯಾಗಿದ್ದರೆಂದು ಶಂಕಿಸಲಾಗಿದೆ ಎಂದು ಪೊಲೀಸರಿಂದ ವರದಿಯಾಗಿದೆ.