×
Ad

ಅನರ್ಹಗೊಂಡ ಶಾಸಕರ ಮೇಲ್ಮನವಿ; ಆದೇಶವನ್ನು ಸಂಜೆ 4:00 ಗಂಟೆಗೆ ಪ್ರಕಟಿಸಲಿರುವ ಸುಪ್ರೀಂ

Update: 2016-05-09 15:10 IST

ಹೊಸದಿಲ್ಲಿ, ಮೇ 9: ತಮ್ಮ ಅರ್ಜಿಯನ್ನು ವಜಾಗೊಳಿರುವ ಉತ್ತರಾಖಂಡ್‌ ಹೈಕೋರ್ಟ್‌‌ನ ಆದೇಶವನ್ನು ಪ್ರಶ್ನಿಸಿ ಅನರ್ಹಗೊಂಡ 9 ಮಂದಿ ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌‌ ಆದೇಶವನ್ನು ಇಂದು ಸಂಜೆ  4:00 ಗಂಟೆಗೆ ಪ್ರಕಟಿಸಲಿದೆ.
ಮಂಗಳವಾರ  ಉತ್ತರಾಖಂಡ್‌ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಹಿನ್ನೆಲೆಯಲ್ಲಿ  ಅನರ್ಹಗೊಂಡ ಶಾಸಕರು ಉತ್ತರಾಖಂಡ್‌ ಹೈಕೊರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಬೇಗನೆ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌‌ ಈ ಬಗ್ಗೆ ಆದೇಶವನ್ನು ಕಾಯ್ದಿರಿಸಿದೆ. 
ಅನರ್ಹಗೊಂಡ ಶಾಸಕರ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ  ಹೈಕೋರ್ಟ್‌ ಸ್ವೀಕರ‍್ ಆದೇಶವನ್ನು ಎತ್ತಿ ಹಿಡಿದು, ಶಾಸಕರ ಮನವಿಯನ್ನು ತಿರಸ್ಕರಿಸಿತ್ತು.
ಅನರ್ಹಗೊಂಡ ಶಾಸಕರ ಅರ್ಜಿಯನ್ನು ಇಂದು ವಜಾಗೊಳಿಸಿದ್ದ ಹೈಕೋರ್ಟ್‌ ಮಂಗಳವಾರ ನಡೆಯಲಿರುವ ವಿಸ್ವಾಸಮತದ ವೇಳೆ ಅನರ್ಹಗೊಂಡ ಶಾಸಕರಿಗೆ ಮತದಾನದ ಹಕ್ಕು ಇಲ್ಲ ಮತ್ತು ವಿಶ್ವಾಸಮತ ಯಾಚನೆಯ ಸಭೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ ಶಾಸಕರು ಸುಪ್ರೀಂಕೊರ್ಟ್‌‌ನ ಮೊರೆ ಹೋಗಿದ್ದರು.
ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರಕಾರದ 9 ಮಂದಿ ಶಾಸಕರು ಬಂಡಾಯ ಎದ್ದು ಬಿಜೆಪಿ  ಜೊತೆ ಗುರುತಿಸಿಕೊಂಡಿದ್ದರು. ಅನರ್ಹಗೊಂಡ ೯ ಮಂದಿ ಶಾಸಕರು ಅನರ್ಹಗೊಳಿಸಿದ್ದ ಸ್ವೀಕರ್‌ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಲೇರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News