ವಿದ್ಯಾರ್ಥಿನಿಯರ ಲೈಂಗಿಕ ಶೋಷಣೆ: ಮದ್ರಸಾ ಅಧ್ಯಾಪಕನ ಬಂಧನ!
Update: 2016-05-09 15:12 IST
ಕೋಟ್ಟಕಲ್, ಮೇ 9: ಏಳುಮಂದಿ ಮದ್ರಸಾ ವಿದ್ಯಾರ್ಥಿನಿಯರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ ಮದ್ರಸಾ ಅಧ್ಯಾಪಕನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಪುತುಪರಂಬು ಪೀಚ್ಚಿಮಣ್ಣಿಲ್ ಅಬ್ದುರ್ರಹ್ಮಾನ್(55)ನನ್ನು ಬಂಧಿಸಲಾಗಿದ್ದು ಐದನೆ ತರಗತಿಯ ವಿದ್ಯಾರ್ಥಿನಿಯರನ್ನು ಈತ ಶೋಷಣೆಗೆ ಗುರಿಪಡಿಸಿದ್ದ ಎನ್ನಲಾಗಿದೆ. ಸಂತ್ರಸ್ತ ಹೆಣ್ಣುಮಕ್ಕಳು ಹೆತ್ತವರಲ್ಲಿ ಹೇಳಿದ್ದು ಹೆತ್ತವರು ಚೈಲ್ಡ್‌ಲೈನ್ ಕಾರ್ಯಕರ್ತರಿಗೆ ಮಾಹಿತಿನೀಡಿದ್ದರು. ತದನಂತರ ಎಸ್‌ಐ ಮಂಜಿತ್ ಲಾಲ್ ಈತನನ್ನು ಬಂಧಿಸಿದ್ದಾರೆ. ಹೆಮ್ಮಕ್ಕಳಿಗೆ ಚಾಕಲೇಟ್ ಇತ್ಯಾದಿಕೊಟ್ಟು ಶೋಷಣೆ ನಡೆಸುತ್ತಿದ್ದ. ಕೋರ್ಟ್ ಹಾಜರುಪಡಿಸಿ ಈತನಿಗೆ ರಿಮಾಂಡ್ ವಿಧಿಸಲಾಗಿದೆ.