×
Ad

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ ಜೀವ ಬೆದರಿಕೆ

Update: 2016-05-09 17:38 IST

ಹೊಸದಿಲ್ಲಿ, ಮೇ 9: ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಜೀವ  ಬೆದರಿಕೆಯ ಪತ್ರ ಬಂದಿದ್ದು, ರಾಹುಲ್ ಅವರಿಗೆ ಭಧ್ರತೆಯನ್ನು ಹೆಚ್ಚಿಸುವಂತೆ ಕಾಂಗ್ರೆಸ್‌  ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಿದೆ.
ರಾಹುಲ್‌ ಗಾಂಧಿ ಮಂಗಳವಾರ ಕಾರೈಕಲ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ  ರಾಹುಲ್‌ ಗಾಂಧಿ ಭಾಗವಹಿಸಿದರೆ  ಬಾಂಬ್‌ ಸ್ಫೋಟಿಸಿ ಕೊಲ್ಲುವುದಾಗಿ  ಪತ್ರವೊಂದು ಪುದುಚೇರಿ ಕಾಂಗ್ರೆಸ್‌ ಕಚೇರಿಗೆ  ಬಂದಿದೆ.ಪಾಂಡಿಚೇರಿಯಲ್ಲಿ ಕೈಗಾರಿಕೆಗಳು ಮುಚ್ಚಲು ಕಾಂಗ್ರೆಸ್‌ ಕಾರಣವೆಂದು ಈ ಪತ್ರದಲ್ಲಿ ಆರೋಪಿಸಲಾಗಿದೆ.  ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ನ ನಾಯಕರಾದ  ಆನಂದ ಶರ್ಮ, ಅಹ್ಮದ್‌ ಪಟೇಲ್ ಮತ್ತಿತರರು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಕೇಂದ್ರ ಸರಕಾರ ರಾಹುಲ್‌ಗೆ ಭದ್ರತೆಯನ್ನು ಹೆಚ್ಚಿಸುವ ಭರವಸೆ ನೀಡಿದೆ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News