ನಾಗರೀಕ ಸೇವಾ ಪರೀಕ್ಷೆ : ಟೀನಾ ದೇಶಕ್ಕೆ ಟಾಪರ್ , ಅಥರ್ ಖಾನ್ ಸೆಕೆಂಡ್
ಜಮ್ಮು-ಕಾಶ್ಮಿರದ ಅಥಾರ್ ಆಮಿರ್ ಉಲ್ ಶಾಫಿ ಖಾನ್ ದ್ವಿತೀಯ ಸ್ಥಾನ ಗಳಿಸಿದರೆ, ದಿಲ್ಲಿ ಮೂಲದ, ಭಾರತೀಯ ಕಂದಾಯ ಇಲಾಖೆ ಅಧಿಕಾರಿ ಜಸ್ಮೀತ್ ಸಿಂಗ್ ಸಂಧು ಮೂರನೆ ಸ್ಥಾನ ಪಡೆದಿದ್ದಾರೆ.
ಹೊಸದಿಲ್ಲಿ,ಮೇ 10: 2015ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ದಿಲ್ಲಿಯ ಟೀನಾ ದಾಬಿ ಈ ಕಠಿಣ ಪರೀಕ್ಷೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ ಜಾಲತಾಣದಲ್ಲಿ ಫಲಿತಾಂಶಗಳನ್ನು ಘೋಷಿಸಲಾಗಿದೆ.
ದಿಲ್ಲಿಯ ಲೇಡಿ ಶ್ರೀರಾಮ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಪದವಿಯನ್ನು ಪಡೆದಿರುವ ಟೀನಾ ಕಾನ್ವೆಂಟ್ ಆಫ್ ಜೀಸಸ್ ಆ್ಯಂಡ್ ಮೇರಿ ಶಿಕ್ಷಣ ಸಂಸ್ಥೆಯಲ್ಲಿ 12ನೆಯ ತರಗತಿಯನ್ನು ಪೂರೈಸಿದ್ದರು.
ಅಗ್ರ 20 ಸ್ಥಾನಿಗಳು
1 ಟೀನಾ ದಾಬಿ
2 ಅಥಾರ್ ಆಮಿರ್ ಉಲ್ ಶಾಫಿ ಖಾನ್
3 ಜಸ್ಮೀತ್ ಸಿಂಗ್ ಸಂಧು
4 ಅರ್ತಿಕಾ ಶುಕ್ಲಾ
5 ಶಶಾಂಕ್ ತ್ರಿಪಾಠಿ
6 ಆಶಿಷ್ ತಿವಾರಿ
7 ಶರಣ್ಯಾ ಆರಿ
8 ಕುಂಭ್ಜೇಕಾರ್ ಯೋಗೇಶ ವಿಜಯ
9 ಕರ್ಣ ಸತ್ಯಾರ್ಥಿ
10 ಅನುಪಮ್ ಶುಕ್ಲಾ
11 ಅನುರಾಗ್ ಚಂದರ್ ಶರ್ಮಾ
12 ಆಶಿಷ್ 13 ಸಿದ್ಧಾರ್ಥ ಜೈನ್
14 ಕೀರ್ತಿ ಸಿ.
15 ಪ್ರತಾಪ ಸಿಂಗ್
16 ಶ್ರೀಕೃಷ್ಣನಾಥ ಬಿ.ಪಾಂಚಾಲ
17 ಅಮಿತ್ ಪಾಲ್
18 ಅಂಷುಲ್ ಗುಪ್ತಾ
19 ಶ್ವೇತಾ ಅಗರವಾಲ್
20 ವಿಪಿನ್ ಗರ್ಗ್
ಸಾಮಾನ್ಯ ವರ್ಗದ 499, ಇತರ ಹಿಂದುಳಿದ ವರ್ಗಗಳ 314, ಪರಿಶಿಷ್ಟ ಜಾತಿಗಳ 176 ಮತ್ತು ಪರಿಶಿಷ್ಟ ಪಂಗಡಗಳ 89 ಅಭ್ಯರ್ಥಿಗಳು ಸೇರಿದಂತೆ ಒಟ್ಟೂ 1,078 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ. 172 ಅಭ್ಯರ್ಥಿಗಳ ಮೀಸಲು ಪಟ್ಟಿಯೊಂದನ್ನು ತಾನು ಕಾಯ್ದುಕೊಂಡಿರುವುದಾಗಿ ಆಯೋಗವು ತಿಳಿಸಿದೆ. 2015ರಲ್ಲಿ ಲಿಖಿತ ಪರೀಕ್ಷೆಗಳು ಮತ್ತು ಮಾರ್ಚ್-ಮೇ 2016ರಲ್ಲಿ ಸಂದರ್ಶನಗಳು ನಡೆದಿದ್ದವು.