ನಕಲಿ ವೆಬ್ ಸೈಟ್‌ಗಳಿಗೆ ಕೋಟ್ಯಂತರ ರೂಪಾಯಿ ನೀಡಿದ್ದ ಮಧ್ಯ ಪ್ರದೇಶ ಸರಕಾರ
ಭೋಪಾಲ್, ಮೇ 10: ಮಧ್ಯ ಪ್ರದೇಶ ಸರಕಾರವು ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 234 ವೆಬ್‌ಸೈಟ್‌ಗಳಿಗೆ ಬೇಕಾಬಿಟ್ಟಿ ಜಾಹೀರಾತು ನೀಡಿ 14 ಕೋಟಿ ರೂ. ಪಾವತಿಸಿದೆ. ಇವುಗಳಲ್ಲಿ ಹೆಚ್ಚಿನ ವೆಬ್ ಸೈಟ್‌ಗಳನ್ನು ರಾಜ್ಯದ ಕೆಲ ಪತ್ರಕರ್ತರು ಯಾ ಅವರ ಸಂಬಂದಿಗಳೇ ನಡೆಸುತ್ತಿದ್ದರು, ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ತನಿಖಾ ವರದಿಯೊಂದು ತಿಳಿಸಿದೆ.
ಕಾಂಗ್ರೆಸ್ ಶಾಸಕ ಬಾಲ ಬಚ್ಚನ್ ಅವರು ಎತ್ತಿದ ಪ್ರಶ್ನೆಯೊಂದಕ್ಕೆ ರಾಜ್ಯ ವಿಧಾನಸಭೆಯಲ್ಲಿ ನೀಡಿದ ಉತ್ತರವೊಂದರಲ್ಲಿ ಮೇಲಿನ ಮಾಹಿತಿ ನೀಡಲಾಗಿದ್ದು, ಸರಕಾರ 2012-2015ರಲ್ಲಿ ಸಿದ್ಧ ಪಡಿಸಲಾಗಿದ್ದ ಪಟ್ಟಿಯಲ್ಲಿ ವೆಬ್‌ಸೈಟ್‌ಗಳಿಗೆ ಜಾಹೀರಾತಿಗೆಂದು ರೂ. 10,000ದಿಂದ ರೂ. 21.7 ಲಕ್ಷದ ತನಕ ಪಾವತಿಸಲಾಗಿದೆಯೆಂದು ತಿಳಿಸಿತ್ತು
ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿಯಿಂದ ತಿಳಿದು ಬಂದುದೇನೆಂದರೆ - ಕನಿಷ್ಠ 26 ವೆಬ್‌ಸೈಟ್‌ಗಳು ರೂ. 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಜಾಹೀರಾತುಗಳ ಮುಖಾಂತರ ಪಡೆದಿದ್ದರೆ, ಇವುಗಳಲ್ಲಿ ಕನಿಷ್ಠ 18 ವೆಬ್‌ಸೈಟ್‌ಗಳನ್ನು ಪತ್ರಕರ್ತರು ಅಥವಾ ಅವರ ಸಂಬಂಧಿಗಳೇ ನಡೆಸುತ್ತಿದ್ದರು.
ಕನಿಷ್ಠ 81 ವೆಬ್‌ಸೈಟ್‌ಗಳು, ಅವುಗಳಲ್ಲಿ ಹೆಚ್ಚಿನವು ಪತ್ರಕರ್ತರ ಸಂಬಂಧಿಗಳಿಂದ ನಡೆಸಲ್ಪಟ್ಟವುಗಳು ರೂ. 5 ಲಕ್ಷದಿಂದ ರೂ. 1 ಲಕ್ಷದ ತನಕ ಜಾಹೀರಾತುಗಳ ಮುಖಾಂತರ ಪಡೆದಿದ್ದರೆ, ಇವುಗಳಲ್ಲಿ ಕನಿಷ್ಠ 33 ವೆಬ್‌ಸೈಟ್‌ಗಳು ಸರಕಾರದಿಂದ ಮಂಜೂರಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇವುಗಳಲ್ಲಿ ಹೆಚ್ಚಿನ ವೆಬ್‌ಸೈಟ್‌ಗಳು ಉದಾ: ಪೈಲಾನ್.ಕಾಂ, ದೇಶ್‌ಭಕ್ತಿ.ಕಾಂ, ರಾಷ್ಟ್ರವಾದ್.ಕಾಂ, ಸಿಟಿಚೌಕ್.ಕಾಂ, ಪ್ರಕಲ್ಪ್.ಕಾಂ, ಹೆಸರು ಬೇರೆ ಬೇರೆಯಾದರೂ ಒಂದೇ ರೀತಿಯ ವರದಿಗಳನ್ನು ಹೊಂದಿದ್ದವೆಂದು ಇಂಡಿಯನ್ ಎಕ್ಸ್‌ಪ್ರೆಸ್ ಕಂಡುಕೊಂಡಿದೆಯಲ್ಲದೆ ಅವುಗಳಲ್ಲಿ ಪೈಲಾನ್.ಕಾಂ ಹಾಗೂ ಇಂಡಿಯನ್‌ನ್ಯೂಸ್.ಕಾಂ ವಿಳಾಸಗಳು ಇಂದೇ ತೆರನಾಗಿ ಇದ್ದವು ಎಂದೂ ಹೇಳಿದೆ.
ಹೆಚ್ಚಿನ ವೆಬ್‌ಸೈಟ್‌ಗಳು ಱಅಬೌಟ್ ಅಸ್‌ೞ ಅಥವಾ ಱಕಾಂಟ್ಯಾಕ್ಟ್ ಅಸ್‌ೞ ಶೀರ್ಷಿಕೆಯಡಿಯಲ್ಲಿ ತಮ್ಮ ಮೂಲ ಸಂಪರ್ಕ ವಿಳಾಸವನ್ನೇ ನೀಡಿಲ್ಲವೆಂದೂ ತಿಳಿದು ಬಂದಿದೆ.