×
Ad

ವಿಜಯ ಮಲ್ಯನ ಗಡಿಪಾರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದ ಇಂಗ್ಲೆಂಡ್‌

Update: 2016-05-11 11:13 IST


ಲಂಡನ್‌, ಮೇ 11: ಸರಿಸುಮಾರು 9000  ರೂ.ಕೋಟಿ ಸಾಲವನ್ನು ವಿವಿಧ ಬ್ಯಾಂಕ್‌ಗಳಿಗೆ ಮರು ಪಾವತಿ ಮಾಡದೆ ಲಂಡನ್‌ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ  ಅವರನ್ನು ಗಡಿಪಾರು ಮಾಡಲು  ಕಾನೂನಿನಲ್ಲಿ ಅವಕಾಶವಿಲ್ಲ. ಹಸ್ತಾಂತರಕ್ಕೆ ಮನವಿ ಮಾಡಿದಲ್ಲಿ ಈ ನಿಟ್ಟಿನಲ್ಲಿ ಸಹಕರಿಸುವುದಾಗಿ ಭಾರತಕ್ಕೆ ಇಂಗ್ಲೆಂಡ್‌ ತಿಳಿಸಿದೆ.
ಭಾರತ ಇತ್ತೀಚೆಗೆ ಮಲ್ಯರನ್ನು ಗಡಿಪಾರ ಮಾಡುವಂತೆ ಇಂಗ್ಲೆಂಡ್‌ಗೆ ಪತ್ರ ಬರೆದಿತ್ತು.  ಪತ್ರಕ್ಕೆ ಉತ್ತರ  ನೀಡಿರುವ ಇಂಗ್ಲೆಂಡ್‌" ವಿಜಯ್‌ ಮಲ್ಯ ಇಂಗ್ಲೆಂಡ್‌ ಪ್ರವೇಶಿಸುವಾಗ ಕಾನೂಬದ್ಧ ಪಾಸ್‌ಪೋರ್ಟ್‌ ಹೊಂದಿದ್ದರು. ಈ ಕಾರಣದಿಂದಾಗಿ ಅವರಿಗೆ ಇಂಗ್ಲೆಂಡ್‌ನಲ್ಲಿರಲು 1971ರ ಇಮಿಗ್ರೇಷನ್‌ ಕಾಯ್ದೆ ಪ್ರಕಾರ ಯಾವುದೇ ಅಡ್ಡಿ ಇಲ್ಲ. ಮಲ್ಯ ಲಂಡನ್‌ ಪ್ರವೇಶಿಸಿದ ಬಳಿಕ ಅವರ ಪಾಸ್‌ಪೋರ್ಟ್‌ನ್ನು ಭಾರತ  ರದ್ದುಪಡಿಸಿದೆ. ಈ ಕಾರಣದಿಂದ ಅವರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ. ಮಲ್ಯರನ್ನು ಹಸ್ತಾಂತರಕ್ಕೆ ಭಾರತ ಮನವಿ ಮಾಡಿದಲ್ಲಿ ಈ ಬಗ್ಗೆ ಸಹಕಾರ ನೀಡುವುದಾಗಿ ಇಂಗ್ಲೆಂಡ್‌ ತಿಳಿಸಿದೆ” ಎಂದು ವಿದೇಶಾಂಗ  ಇಲಾಖೆಯ  ವಕ್ತಾರ ವಿಕಾಸ್‌ ಸ್ವರೂಪ್ ತಿಳಿಸಿದ್ದಾರೆ.
 ವಿಜಯ್‌ ಮಲ್ಯರ ಪಾಸ್‌ಪೋರ್ಟ್‌‌ನ್ನು ಭಾರತ ಕಳೆದ ತಿಂಗಳು ರದ್ದುಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News