×
Ad

ಕಾಲ್‌ಡ್ರಾಪ್‌ಗೆ ದಂಡ; ಟ್ರಾಯ್‌ ಶಿಫಾರಸು ತಿರಸ್ಕರಿಸಿದ ಸುಪ್ರೀಂ

Update: 2016-05-11 11:39 IST

ಹೊಸದಿಲ್ಲಿ, ಮೇ 11: ಕಾಲ್‌ ಡ್ರಾಪ್‌ಗೆ ದಂಡ ವಿಧಿಸುವ ಟ್ರಾಯ್‌ ಶಿಫಾರಸನ್ನು ಸುಪ್ರೀಂ ಕೋರ್ಟ್‌ ಇಂದು ರದ್ದುಪಡಿಸಿದೆ.
ಒಂದು ಕಾಲ್‌ಡ್ರಾಪ್‌ಗೆ ಒಂದು ರೂ ದಂಡ ವಿಧಿಸುವಂತೆ ಭಾರತೀಯ ದೂರಸಂಪರ್ಕ ಪ್ರಾಧಿಕಾರ(ಟ್ರಾಯ್‌) ಶಿಫಾರಸು ಮಾಡಿತ್ತು. 
ಒಂದು ಕಾಲ್‌ ಡ್ರಾಪ್‌ಗೆ ಒಂದು ರೂ. ದಂಡ ವಿಧಿಸುವ ಟ್ರಾಯ್‌  ಟ್ರಾಯ್‌ ಶಿಫಾರಸನ್ನು ದಿಲ್ಲಿ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಟೆಲಿಕಾಂ ಕಂಪೆನಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. 
ಮೊಬೈಲ್‌ ಕಂಪೆನಿಗಳ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಕಾಲ್‌ಡ್ರಾಪ್‌ಗೆ ದಂಡ  ಸಕಾರಣವಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಟ್ರಾಯ್‌ ಶಿಫಾರಸನ್ನು ರದ್ದುಪಡಿಸಿದೆ.
ಸುಪ್ರೀಂ ಕೋರ್ಟ್‌ ಆದೇಶದಂತೆ ಟೆಲಿಕಾಂ ಕಂಪೆನಿಗಳಿಗೆ ಬಿಗ್‌ ರಿಲೀಪ್‌ ಸಿಕ್ಕಿದೆ. ಆದರೆ ಮೊಬೈಲ್‌ ಗ್ರಾಹಕರಿಗೆ ಹಿನ್ನಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News