×
Ad

ಆ ಸಾಬುವನ್ನು ಪೊಲೀಸರು ಸರಿಯಾಗಿ ಕೇಳಿದರೆ, ಸತ್ಯ ಹೊರಬರಲಿದೆ

Update: 2016-05-11 12:18 IST

ಪೆರುಂಬಾವೂರ್, ಮೇ 11: ಪರಿಸರದಲ್ಲಿರುವವರಲ್ಲದೆ ಬೇರೆಯಾರೂ ತನ್ನ ಮಗಳನ್ನು ಕೊಂದಿರಲಾರರು ಎಂದು ದುಃಖದ ಕಟ್ಟೆಯೊಡೆದು ಅಳತ್ತಾ ಜಿಶಾರ ಅಮ್ಮ ರಾಜೇಶ್ವರಿ ಹೇಳಿದ್ದಾರೆ. ಆ ಸಾಬುವಿನೊಂದಿಗೆ ಪೊಲೀಸರು ಸರಿಯಾಗಿ ಕೇಳಿದರೆ ಸತ್ಯ ಹೊರಬರಲಿದೆ. ಹೀಗೆಂದು ನೆರೆಯ ಯುವಕನತ್ತ ಬೆರಳು ತೋರಿಸಿ ರಾಜೇಶ್ವರಿ ಹೇಳಿದ್ದಾರೆಂದು ಪತ್ರಿಕೆಯೊಂದು ವರದಿಮಾಡಿದೆ. ಆಸ್ಪತ್ರೆ ಸುಪರಿಡೆಂಟ್ ಡಾ. ಸುಮತಿಯ ಅನುಮತಿಯಲ್ಲಿ ರಾಜೇಶ್ವರಿಯನ್ನು ಭೇಟಿಯಾಗಲು ಪೊಲೀಸರು ಅನುಮತಿ ನೀಡಿದ್ದ ಕೆಲವೇ ಸಮಯದಲ್ಲಿ ನೇರವಾಗಿ ಅವರು ತಮ್ಮ ದುಃಖಗಳನ್ನು ಹೇಳಿಕೊಂಡರು. ಅಮ್ಮನನ್ನೂ ಮಗಳನ್ನೂ ಕೊಲ್ಲುವೆವು ಎಂದು ನೆರೆಯ ಜನರು ಬೆದರಿಕೆ ಹಾಕಿದ್ದರು. ಬೆದರಿಕೆ ಹೆಚ್ಚಿದಾಗ ಜಿಶಾಳಿಗೆ ಪೆನ್‌ಕ್ಯಾಮರಾವನ್ನು ಖರೀದಿಸಿದ್ದು. ಆಕ್ರಮಿಸಲು ಬರುವವರ ಚಿತ್ರ ತೆಗೆಯಲು ಕ್ಯಾಮರ ಬೇಕು ಎಂದು ಜಿಶಾ ಹೇಳಿದ್ದಳು. ನನ್ನ ಮಗಳು ಹೆದರಿಯೇ ಜೀವಿಸುತ್ತಿದ್ದಳು. ರಾತ್ರೆಯ ವೇಳೆ ಅವರು ಮನೆಯ ಸುತ್ತಲೂ ನಡೆದಾಡುತ್ತಿದ್ದರು. ಅಶ್ಲೀಲವಾಗಿ ಬೈಯುತ್ತಿದ್ದರು. ಮನೆಯ ಮೇಲೆ ಮೂತ್ರ ಒಯ್ಯುತ್ತಿದ್ದರು. ನಗ್ನತೆ ಪ್ರದರ್ಶಿಸುತ್ತಿದ್ದರು. ಹಲವು ರೀತಿಯಲ್ಲಿ ಉಪದ್ರವ ಕೊಡುತ್ತಿದ್ದರು ಎಂದು ಜಿಶಾ ತಾಯಿ ಹೇಳಿದ್ದಾರೆ. ದೀಪಾಳನ್ನು ನೆರೆಯ ಪೈಂಟರ್‌ನೊಡನೆ ಓಡಿ ಹೋಗಲು ನೆರವಾಗಿದ್ದು ನೆರೆಯವರು. ರಿಜಿಸ್ಟ್ರರ್ ಮದುವೆ ಮಾಡಿಕೊಳ್ಳಲು ಒತ್ತಡ ಹಾಕಿದರು. ತಾನು ಮನೆಯಲ್ಲಿಲ್ಲದ ಸಮಯದಲ್ಲಿ ಇವೆಲ್ಲ ನಡೆದಿದ್ದವು. ತನ್ನ ಈ ಮಗಳಿಗೂ ಆ ಗತಿ ಬರಬಾರದೆಂದು ಬಯಸಿದ್ದೆ ಎಂದು ಹೇಳಿ ರಾಜೇಶ್ವರಿ ದುಃಖಿಸಿದರು.

ದೀಪಾಳ ವಿಷಯದಲ್ಲಿ ತಾನೊಬ್ಬ ವಕೀಲರನ್ನು ಭೇಟಿಯಾಗಿದ್ದೆ. ಅಲ್ಲಿಂದ ನನಗೆ ನ್ಯಾಯ ಸಿಗಲಿಲ್ಲ. ಬಡವರಿಗಾಗಿ ಏನನ್ನೂ ಪಡೆಯದೆ ವಾದಿಸಲಿಕ್ಕಾಗಿ ಜಿಶಾಳನ್ನು ವಕೀಲಳಾಗಿಸಬೇಕೆಂದು ಬಯಸಿದ್ದೆ. ಆದರೆ ಈಗ ಜಿಶಾ ಮೃತಳಾಗಿದ್ದಾಳೆ.

ಬೇರೆ ಯಾರಿಂದಲೂ ನಮಗೆ ಬೆದರಿಕೆ ಎದುರಾಗಿಲ್ಲ. ಮನೆಯ ಕೆಲಸದ ಸಂಬಳದ ಕುರಿತು ಒಬ್ಬ ಭಾಯಿಯೊಂದಿಗೆ ಸ್ವಲ್ಪವಿವಾದ ಆಗಿತ್ತು. ಆದರೆ ಸಂಬಳದ ಹಣವನ್ನು ಕೊಟ್ಟಾಗ ವಿವಾದ ಕೊನೆಗೊಂಡಿತ್ತು. ಎಂದು ರಾಜೇಶ್ವರಿ ಹೇಳಿದ್ದಾರೆ. ಆದರೆ ರಾಜೇಶ್ವರಿಯವರ ಆರೋಪ ಆಧಾರರಹಿತವಾದ್ದದೆಂದು ನೆರೆಯ ಮನೆ ನಿವಾಸಿ ಸಾಬು ಹೇಳಿದ್ದಾನೆ. ದೀಪಾ ಮತ್ತು ಜಿಶಾ ಮಕ್ಕಳ ಸಹಿತ ಪತಿಯೊಂದಿಗೆ ಇಪ್ಪತ್ತು ವರ್ಷ ಮೊದಲು ಇರಿಂಙೋಲ್ ವಾಟ್ಟೋಳಪ್ಪಿಗೆ ಬಂದರು. ಆಂದು ತಮ್ಮ ಮನೆಯಲ್ಲಿ ಮಾತ್ರ ಟಿವಿ ಇದ್ದುದು. ಟೀವಿ ನೋಡುವ ವಿಚಾರದಲ್ಲಿ ರಾಜೇಶ್ವರಿ ಜಗಳ ಮಾಡಿದ್ದರು. ಆಬಳಿಕ ಅವರು ತನ್ನ ವಿರುದ್ಧ ಪೊಲೀಸ್ ಕೇಸನ್ನೂ ನೀಡಿದ್ದರು. ಆಮೇಲೆ ಆಮನೆಯ ಕಡೆಗೆ ನೋಡಿಯೂ ಇಲ್ಲ ಎಂದು ಸಾಬು ಹೇಳಿದ್ದಾನೆ.

ಈ ನಡುವೆ ರಾಜೇಶ್ವರಿಯೊಂದಿಗೆ ಸರಿಯಾದ ಮಾತುಕಥೆ ಸಂಬಂಧವೇ ಇರಲಿಲ್ಲ. ಆದರೆ ಜಿಶಾ ಹಾಗೆ ಆಗಿರಲಿಲ್ಲ ಎಂದು ನೆರೆಯ ನಿವಾಸಿ ವರ್ಗೀಸ್ ಹೇಳಿದ್ದಾರೆ.28ರಂದು ರಾತ್ರೆ 8:30ಕ್ಕೆ ತಾನು ಫೋನು ಮಾಡಿ ತಿಳಿಸಿದ್ದರಿಂದ ಪೊಲೀಸರು ಬಂದರು ಮತ್ತು ಕೊಲೆಯಾದದ್ದು ಆಮೇಲೆಯೇ ಗೊತ್ತಾದದ್ದು ಎಂದು ವರ್ಗೀಸ್ ಹೇಳಿದ್ದಾರೆ. ಅಂದು ಅಂದು ಸಂಜೆ ಜಿಶಾರು ಬೊಬ್ಬೆ ಹಾಕಿದ್ದು ಎಲ್ಲರೂ ಕೇಳಿದ್ದರು.ಆದರೆ ಯಾರೂ ಅಲ್ಲಿಗೆ ಹೋಗಲಿಲ್ಲ. ಹಳದಿ ಅಂಗಿ ಹಾಕಿದ ಒಬ್ಬ ವ್ಯಕ್ತಿ ತೋಡು ದಾಟಿ ಹೋಗುವುದನ್ನು ಕೆಲವರು ನೋಡಿದ್ದಾರೆ ಎಂದೂ ವರ್ಗಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News