×
Ad

ಉತ್ತರಾಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಹಿಂಪಡೆಯುತ್ತೇವೆ : ಕೇಂದ್ರ ಸರಕಾರ

Update: 2016-05-11 12:37 IST

ಹೊಸದಿಲ್ಲಿ, ಮೇ 11: ಉತ್ತರಾಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತವನ್ನು ಹಿಂಪಡೆಯುವುದಾಗಿ ಕೇಂದ್ರ ಸರಕಾರ ಇಂದು ಸುಪ್ರೀಂ ಕೋರ್ಟ್‌‌ಗೆ ತಿಳಿಸಿದೆ.
ಇದರೊಂದಿಗೆ  ಉತ್ತರಾಖಾಂಡ್‌ನಲ್ಲಿ ಬಲಾಬಲ ಪರೀಕ್ಷೆಯಲ್ಲಿ ಕೇಂದ್ರ ಸರಕಾರ ಸೋಲೊಪ್ಪಿಕೊಂಡಿದೆ. ಹರೀಶ್ ರಾವತ್‌ಗೆ ಬಹುಮತ ದೊರತಿದ್ದು ಮಾಧ್ಯಮಗಳ ವರದಿಯಿಂದ ಗೊತ್ತಾಗಿದೆ. ಹೀಗಾಗಿ ರಾವತ್‌ ಸರಕಾರ ರಚಿಸಲಿ  ಎಂಬ ಕೇಂದ್ರದ ನಿರ್ಧಾರವನ್ನು ಅಟಾರ್ನಿ  ಜನರಲ್‌ ಮುಕುಲ್ ರೋಹ್ಟಗಿ   ಸುಪ್ರೀಂ ಕೋರ್ಟ್‌‌ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News