×
Ad

ತೀಸ್ತಾ ಸಬ್‌ರಂಗ್ ಎನ್‌ಜಿಒ ಪ್ರಕರಣ: ಪತ್ರ ಬರೆದಿಟ್ಟು ಗೃಹ ಸಚಿವಾಲಯದ ಅಂಡರ್ ಸೆಕ್ರೆಟರಿ ನಾಪತ್ತೆ!

Update: 2016-05-11 15:49 IST

 ಗಾಝಿಯಾಬಾದ್, ಮೇ 11: ತೀಸ್ತಾ ಸೆಟಲ್ವಾಡ್‌ರ ಎನ್‌ಜಿಒ ಸಬ್‌ರಂಗ್ ನ ವಿದೇಶಿ ಚಂದಾ ಸಂಗ್ರಹದ ಫೈಲುಗಳನ್ನು ಮಾಯಮಾಡಿದ ಆರೋಪಿ ಗೃಹಸಚಿವಾಲಯದ ಅಧೀನ ಕಾರ್ಯದರ್ಶಿ ಆನಂದ್ ಜೋಷಿ ಇಂದು ಬೆಳಗ್ಗೆ ಪತ್ರ ಬರೆದಿಟ್ಟು ತಮ್ಮ ಮನೆಯನ್ನು ತೊರೆದು ಹೋಗಿದ್ದಾರೆ ಎಂದು ವರದಿಯಾಗಿದೆ.

ನಿನ್ನೆ ಸಿಬಿಐ ಆನಂದ್‌ರ ಮನೆಗೆ ದಾಳಿ ಮಾಡಿತ್ತು. ಅವರನ್ನು ಪ್ರಶ್ನಿಸಲು ತಮ್ಮ ಜೊತೆ ಕರೆದುಕೊಂಡು ಹೋಗಿತ್ತು. ಆನಂದ್ ಇವತ್ತು ಮತ್ತೆ ಪ್ರಶ್ನಿಸಲಿಕ್ಕಾಗಿ ಸಿಬಿಐ ಕಚೇರಿಗೆ ಹೋಗಬೇಕಿತ್ತು.ಆದರೆ  ಅವರು ಈಗ ಮನೆಯನ್ನೇ ಬಿಟ್ಟು ಹೋಗಿದ್ದಾರೆ.

    ಆನಂದ್ ಜೋಷಿಯವರ ಮನೆಯವರು ತಿಳಿಸಿರುವ ಪ್ರಕಾರ ಬೆಳಗ್ಗೆ ಎದ್ದು ನೋಡುವಾಗ ಆನಂದ್ ಜೋಷಿಯ ಪತ್ರ ದೊರಕಿತ್ತು. ಅದರಲ್ಲಿ ತನಗೆ ಶಾಂತಿ ಬೇಕಾಗಿದೆ. ಇಲ್ಲಿದ್ದರೆ ಅದು ನನಗೆ ದೊರಕುವುದಿಲ್ಲ. ಆದ್ದರಿಂದ ನಾನು ಮನೆ ತೊರೆದು ಹೋಗುತ್ತಿದ್ದೇನೆಂದು ಜೋಷಿ ಬರೆದಿದ್ದಾರೆಂದು ಮನೆಯವರು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News