×
Ad

ಕೇರಳದಲ್ಲಿ ಮುಗ್ಗರಿಸಿದ ಮೋದಿ

Update: 2016-05-11 16:00 IST

ತಿರುವನಂತಪುರಮ್, ಮೇ 11: ಚುನಾವಣಾ ಪ್ರಚಾರ ಭಾಷಣ ಮಾಡುವುದರಲ್ಲಿ ಪ್ರಧಾನಿ ಮೋದಿಗಿಂತ ಆಕರ್ಷಕ ಭಾಷಣಕಾರರು ಯಾರಿದ್ದಾರೆ ಭಾರತದಲ್ಲಿ ? ಆದರೆ  ತಮ್ಮ ಪಕ್ಷ ಈವರೆಗೆ ಒಂದೇ ಒಂದು ಸ್ಥಾನವನ್ನು ಗೆಲ್ಲದ ರಾಜ್ಯದ ಮತದಾರರಿಗೆ ಮೋಡಿ ಮಾಡುವಲ್ಲಿ ಅವರು ಸಂಪೂರ್ಣ ಎಡವಿದ್ದಾರೆ. ಸರಿಯಾಗಿ ಹೇಳಬೇಕೆಂದರೆ, ಮುಗ್ಗರಿಸಿ ಬಿದ್ದಿದ್ದಾರೆ. ಸೋಮವಾರ ಕಾಸರಗೋಡಿನಲ್ಲಿ ಮಾತನಾಡಿದ ಮೋದಿ ಕೇರಳವನ್ನು ಸೋಮಾಲಿಯಾಕ್ಕೆ ಹೋಲಿಸಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ನವಜಾತು ಶಿಶುಗಳ ಮರಣ ಪ್ರಮಾಣ ಸೋಮಾಲಿಯಕ್ಕಿಂತ ಹೆಚ್ಚಿದೆ ." ಕೇರಳದಲ್ಲಿ ನಿರುದ್ಯೋಗ ಪ್ರಮಾಣ ರಾಷ್ಟ್ರ ಮಟ್ಟಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಇದೆ" ಎಂದು ಪ್ರಧಾನಿ ಹೇಳಿದ್ದಾರೆ.
 
ಸಾಕ್ಷರತೆ ಸಹಿತ ಹಲವು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ದೇಶದ ಇತರ ರಾಜ್ಯಗಳಿಗಿಂತ ಮುಂದಿರುವ ಕೇರಳದ ಜನತೆಗೆ ಪ್ರಧಾನಿಯ 'ಸೊಮಾಲಿಯ ಹೋಲಿಕೆ' ರುಚಿಸಿಲ್ಲ. ಮಂಗಳವಾರ ಪ್ರಧಾನಿಗೆ ಪತ್ರ ಬರೆದ ಮುಖ್ಯಮಂತ್ರಿ ಉಮ್ಮನ್ ಚಾಂಡಿ " ನಿಮ್ಮ ಹೇಳಿಕೆ ಪ್ರಧಾನಿಯ ಹುದ್ದೆಯ ಘನತೆಗೆ ತಕ್ಕುದಾಗಿರಲಿಲ್ಲ. ದೇಶದಲ್ಲಿ ಸೋಮಾಲಿಯದಂತಹ ರಾಜ್ಯ ಇದೆ ಎಂದು ಘೋಷಿಸಲು ಪ್ರಧಾನಿಗೆ ನಾಚಿಕೆಯಲ್ಲವೇ  " ಎಂದು ಹೇಳಿದ್ದಾರೆ. ಆದರೆ ಇದಕ್ಕೂ ಮೊದಲು ಕೇರಳದ ಟ್ವಿಟ್ಟರ್ ಬಳಕೆದಾರರು ಪ್ರಧಾನಿ ವಿರುದ್ಧ ಮುಗಿಬಿದ್ದಿದ್ದಾರೆ. #PoMoneModi ( ಹೋಗು ಮಗನೆ ಮೋದಿ ) ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಗ್  ಆಗಿದೆ. ಕೆಲವರು ಅಂಕಿ ಅಂಶ ನೀಡಿದರೆ , ಇನ್ನು ಕೆಲವರು ಹಾಸ್ಯದ ಮೂಲಕ ಮೊದಿಯನ್ನು ಕುಟುಕಿದ್ದಾರೆ. 
ಅದರ ಕೆಲವು ಸ್ಯಾಂಪಲ್ ಗಳು ಇಲ್ಲಿವೆ : 

https://twitter.com/NirbhayasIndia/status/730227594000502784


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News