×
Ad

ಜಿಶಾಪ್ರಕರಣವನ್ನು ವೋಟು ಬ್ಯಾಂಕ್ ಮಾಡಬೇಡಿ:ಜಸ್ಟಿಸ್ ಕಮಾಲ್ ಪಾಷ!

Update: 2016-05-11 16:14 IST

 ಕೊಚ್ಚಿ, ಮೇ 11: ಪೆರುಂಬಾವೂರಿನಲ್ಲಿ ನಡೆದಿರುವ ಕಾನೂನು ವಿದ್ಯಾರ್ಥಿನಿ ಜಿಶಾರ ಅತ್ಯಾಚಾರ ಹತ್ಯೆ ಪ್ರಕರಣದಲ್ಲಿ ವೋಟು ಬ್ಯಾಂಕ್ ರಾಜಕೀಯ ಮಾಡಬಾರದೆಂದು ಜಸ್ಟಿಸ್ ಕಮಾಲ್ ಪಾಷ ಹೇಳಿದ್ದಾರೆ. ಈ ಕೊಲೆಪಾತಕ ಪೂರ್ವಯೋಜಿತವಾದುದು. ಅದನ್ನು ಸಾಬೀತುಗೊಳಿಸಲು ಪೊಲೀಸರಿಗೆ ಸಮಯ ನೀಡಬೇಕು. ಯಾರನ್ನೋ ಆರೋಪಿ ಮಾಡುವಂತಹ ವಾತಾವರಣವನ್ನು ಸೃಷ್ಟಿಸಬಾರದೆಂದು ಪಾಷ ಹೇಳಿದ್ದಾರೆಂದು ವರದಿಯಾಗಿದೆ. ಕೊಚ್ಚಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುತ್ತಿರುವ ಆಕ್ರಮಣಗಳನ್ನು ಪ್ರತಿಭಟಿಸಿ ನಡೆಸಲಾದ ಚರ್ಚೆಯೊಂದರಲ್ಲಿ ಭಾಗವಹಿಸಿ ಅವರು ಈ ರೀತಿ ಹೇಳಿದ್ದಾರೆ.

ಮಾಧ್ಯಮಗಳು ಪ್ರಕರಣದಲ್ಲಿ ಹಸ್ತಕ್ಷೇಪ ನಡೆಸಬಾರದು. ತನಿಖಾ ಅಧಿಕಾರಿಗಳ ಮೇಲೆ ಒತ್ತಡ ಸೃಷ್ಟಿಸಬಾರದು. ಈ ವಿಷಯವನ್ನು ಮಾಧ್ಯಮಗಳು ಗಮನಿಸಬೇಕಾಗಿದೆ ಎಂದು ಅವರು ಹೇಳಿದರು. ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯವಾಗಿದೆ ಎಂದು ಆರೋಪಿಸಿ ರಾಜ್ಯ ಸರಕಾರದ ವಿರುದ್ಧ ಅದನ್ನೇ ಅಸ್ತ್ರವಾಗಿ ಬಳಸಲು ಪ್ರತಿಪಕ್ಷಗಳು ಶ್ರಮಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಚುನಾವಣಾ ಭಾಷಣಗಳಲ್ಲಿ ಈ ವಿಷಯವನ್ನು ಎತ್ತಿದ್ದಾರೆ. ಸಾವಿರ ಅಪರಾಧಿಗಳು ಪಾರಾದರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ಈಗ ಬದಲಾಗಿದ್ದು ಒಬ್ಬ ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿ ಶಿಕ್ಷಿಸಲ್ಪಡಬಾರದು ಎಂಬ ರೀತಿಯಾಗಿದೆ ಎಂದು ಜಸ್ಟಿಸ್ ಪಾಷ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News