×
Ad

ಗೋಡ್ಸೆಯನ್ನು ಹಿಡಿದಾತನ ಪತ್ನಿಗೆ ಆರ್ಥಿಕ ನೆರವು ನೀಡಿದ ಒಡಿಸ್ಸಾ ಸರಕಾರ

Update: 2016-05-12 17:31 IST

ಭುವನೇಶ್ವರ್, ಮೇ 12 : ಮಹಾತ್ಮಾ ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯನ್ನು ಹಿಡಿಯುವಲ್ಲಿ ಅಸಾಧಾರಣ ಧೈರ್ಯ ತೋರಿಸಿದ ರಘು ನಾಯಕ್‌ರವರು ಮೃತಪಟ್ಟು 33 ವರ್ಷಗಳ ಬಳಿಕ ಅವರ ಪತ್ನಿಗೆ ಒಡಿಸ್ಸಾ ಸರಕಾರ ಇಂದು ರೂ.5 ಲಕ್ಷ ದಷ್ಟು ಆರ್ಥಿಕ ನೆರವನ್ನು ನೀಡಿದೆ.
             

ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ರಘು ನಾಯಕ್ ಪತ್ನಿ ಮಂಡೋದರಿ ನಾಯಕ್‌ಗೆ ಶಾಲು ಹೊದಿಸಿ ಸನ್ಮಾನಿಸಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 5 ಲಕ್ಷ ರೂ .ಮೊತ್ತದ ಚೆಕ್‌ನ್ನು ಹಸ್ತಾಂತರಿಸಿದರು.ಇವರ ಜತೆ ಕೇಂದ್ರಾಪುರದ ಜಿಲ್ಲಾಧಿಕಾರಿ ಮತ್ತು ಆಕೆಯ ಕುಟುಂಬಸ್ಥರು ಇದೇವೇಳೆ ಉಪಸ್ಥಿತರಿದ್ದರು.
          ನಾಯಕ್‌ರವರ ಪತ್ನಿಗೆ ನೀಡಲಾಗಿರುವ ಆರ್ಥಿಕ ನೆರವು ಮುಖ್ಯಮಂತ್ರಿ ಪರಿಹಾರ ನಿಧಿಯದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 ರಘುನಾಯಕ್‌ರ ಸಾಧನೆಯ ಕೆಚ್ಚದೆಯ ಧೈರ್ಯಕ್ಕೆ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್‌ರವರು 500 ರೂ. ನೀಡಿ ಅವರ ಜೀವಿತಾವಧಿಯಲ್ಲೇ ಗೌರವಿಸಿದ್ದರು.
        ರಘು ನಾಯಕ್‌ರವರ ಪತ್ನಿಗೆ ಉಂಟಾಗಿರುವ ಆರ್ಥಿಕ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡಿರುವ ರಾಜ್ಯಸರಕಾರ ಅವರಿಗೆ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.
        1948ರ ಜನವರಿ 30 ರಂದು ದಿಲ್ಲಿಯ ಬಿರ್ಲಾ ಹೌಸ್‌ನಲ್ಲಿ ಮಹಾತ್ಮಾ ಗಾಂಧೀಜಿಗೆ ನಾಥೂರಾಂ ಗೋಡ್ಸೆ ಗುಂಡಿಕ್ಕಿದ. ಆಗ ಅಲ್ಲಿನ ತೋಟದ ಮಾಲಿಯಾಗಿ ಕೆಲಸ ಮಾಡುತ್ತಿದ್ದ ರಘು ನಾಯಕ್‌ಗೆ ,ಗಾಂಧೀಜಿಯನ್ನು ರಕ್ಷಿಸಲು ಸಾಧ್ಯವಾಗದಿದ್ದರೂ , ಗೋಡ್ಸೆಯನ್ನು ಕೆಚ್ಚದೆಯಿಂದ ಬೆನ್ನಟ್ಟಿ ಹಿಡಿಯುವಲ್ಲಿ ಅವರು ಸಫಲರಾಗಿದ್ದರು. ಆ ಬಳಿಕ ಗೋಡ್ಸೆಯನ್ನು ಮರಣ ದಂಡನೆಗೆ ಗುರಿಪಡಿಸಲಾಗಿತ್ತು.
         

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News