×
Ad

ಜಿಶಾ ಹತ್ಯೆಯಲ್ಲಿ ರಾಜಕೀಯ ಸಂಬಂಧವಿದೆ: ರಾಷ್ಟ್ರೀಯ ಮಹಿಳಾ ಅಯೋಗ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ

Update: 2016-05-13 19:20 IST

ಹೊಸದಿಲ್ಲಿ, ಮೇ 13: ಪೆರುಂಬಾವೂರಿನಲ್ಲಿ ಕಾನೂನು ವಿದ್ಯಾರ್ಥಿನಿ ಜಿಶಾ ಕೊಲೆಪ್ರಕರಣದಲ್ಲಿ ರಾಜಕೀಯ ಸಂಬಂಧ ಇರುವವರು ಭಾಗಿಯಾಗಿದ್ದಾರೆಂದು ಶಂಕಿಸುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ಲಲಿತಾ ಕುಮಾರ ಮಂಗಲಂ ಹೇಳಿದ್ದಾರೆ. ಜಿಶಾ ಸಹೋದರಿ ದೀಪಾ ದೂರು ನೀಡಿದರೂ ಕ್ರಮಕೈಗೊಳ್ಳಲು ಪೊಲೀಸರು ಸಿದ್ಧವಾಗಿಲ್ಲ. ಕೇರಳದ ಸರಕಾರ ಈ ವಿಷಯದಲ್ಲಿ ಪಕ್ಷಪಾತ ರಹಿತ ತನಿಖೆ ನಡೆಸೀತೆಂದು ತಾನು ನಿರೀಕ್ಷಿಸುವುದಿಲ್ಲ ಎಂದು ಚ್ಯಾನೆಲ್ಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಚುನಾವಣೆಯ ಹೆಸರು ಹೇಳಿ ಸರಕಾರ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿಸುತ್ತಿದೆ. ತನಿಖೆ ಪ್ರಗತಿ ವರದಿ ಕೇಳಿ ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಸ್ಪಷ್ಟವಾದ ವಸ್ತುಸ್ಥಿತಿಯನ್ನು ಸೇರಿಸಿ ಕೇಂದ್ರ ಗೃಹ ಸಚಿವಾಲಯಕ್ಕೂ ಮಹಿಳಾ-ಶಿಶು ಕಲ್ಯಾಣ ಸಚಿವಾಲಯಕ್ಕೂ ವರದಿ ನೀಡಲಿರುವೆ ಎಂದು ಆಯೋಗದ ಅಧ್ಯಕ್ಷೆ ಹೇಳಿದ್ದಾರೆ. ನಿರ್ಭಯ ಘಟನೆಯಲ್ಲಿ ದಿಲ್ಲಿಯಲ್ಲಿ ಆದ ಅರ್ಧದಷ್ಟೂ ಪ್ರತಿಭಟನೆಗಳು ಕೇರಳದಲ್ಲಿ ನಡೆಯದಿರುವುದು ಆಶ್ಚರ್ಯ ತಂದಿದೆ ಎಂದೂ ಲಲಿತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News