ಮಹಾ ಮೈತ್ರಿಯಿಂದ ತಾನು ದೂರವಾಗಿರಲಿಲ್ಲ, ನಿತೀಶ್ ತನ್ನನ್ನು ದೂರವಿಟ್ಟರು: ಮುಲಾಯಂ ಸಿಂಗ್ ಯಾದವ್

Update: 2016-05-14 06:25 GMT

ಲಕ್ನೊ,ಮೇ 14: ಬಿಹಾರ ವಿಧಾನಸಭಾ ಚುನಾವಣೆಗಿಂತ ಸ್ವಲ್ಪಮೊದಲು ಮಹಾಮೈತ್ರಿಯಿಂದ ದೂರವಾದ ಸಮಾಜವಾದಿ ಪಾರ್ಟಿ ಅಧ್ಯಕ್ಷ ಮುಲಾಯಂ ಸಿಂಗ್ ಮೈತ್ರಿಯಿಂದ ಹಿಂದೆ ಸರಿಯಲು ಬಿಹಾರದ ಇಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್‌ರೇ ಕಾರಣವೆಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಮತ್ತು ಮಾಜಿ ಕೇಂದ್ರ ಸಚಿವರೂ ಆಗಿರುವ ಬೇನಿ ಪ್ರಸಾದ್ ವರ್ವರನ್ನು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಮುಲಾಯಂ ಸಿಂಗ್ ಹೀಗೆ ಹೇಳಿದ್ದಾರೆ.

ಮಹಾಮೈತ್ರಿಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಜಂಟಿಯಾಗಿ ಮಹಾಮೈತ್ರಿಯ ಅಧ್ಯಕ್ಷರಾಗಿ ತನ್ನನ್ನು ನೇಮಕ ಮಾಡಿದ್ದರು ಎಂದ ಮುಲಾಯಂ ಸಿಂಗ್, ಆದರೆ ಚುನಾವಣೆಯ ವೇಳೆ ಅವರಿಬ್ಬರೂ ತನ್ನನ್ನು ತೊರೆದರು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News