ಹಾಲು ಖರೀದಿ ನಿರಾಕರಿಸಿದ್ದಕ್ಕಾಗಿ ಟ್ಯಾಂಕರನ್ನು ತಡೆದು ಹಾಲನ್ನು ರಸ್ತೆಯಲ್ಲಿ ಚೆಲ್ಲಿದರು
Update: 2016-05-14 14:05 IST
ಬರ್ಪಾಲಿ , ಮೇ14: ಎರಡು ಜಿಲ್ಲೆಗಳ ಹಾಲನ್ನು ಖರೀದಿಸಲು ನಿರಾಕರಿಸಿದ ಹಾಲು ಉತ್ಪಾದಕರ ಒಕ್ಕೂಟದ ಕ್ರಮವನ್ನು ವಿರೋಧಿಸಿದ ರೈತರು ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಮತ್ತು ವಾಹನವನ್ನು ತಡೆದು ಹಾಲನ್ನು ನೆಲಕ್ಕೆ ಚೆಲ್ಲಿದ ಘಟನೆ ಶುಕ್ರವಾರ ನಡೆದಿದೆ.
ಬೆಹ್‌ದೆನ್ ಮತ್ತು ಬರ್ಪಾಲಿ ಜಿಲ್ಲೆಗಳ ಹಾಲು ಉತ್ಪಾದಕರು ನೀಡಿದ್ದ ಇಪ್ಪತ್ತು ಸಾವಿರ ಲೀಟರ್ ಹಾಲನ್ನು ಪಡೆಯಲು ಹಾಲು ಉತ್ಪಾದಕರ ಒಕ್ಕೂಟ ನಿರಾಕರಿಸಿತು ಎನ್ನಲಾಗಿದೆ.ಇದರಿಂದ ಸಿಟ್ಟಗೆದ್ದ ರೈತರು ಬರ್ಗರ್ ಜಿಲ್ಲೆಯ ಗಾಂಧಿ ಚೌಕದಲ್ಲಿ ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಮತ್ತು ವಾಹನವನ್ನು ತಡೆದ ರೈತರ ತಂಡ ಸುಮಾರು 6.76ಲಕ್ಷ ರೂ. ಮೌಲ್ಯದ 26 ಸಾವಿರ ಲೀಟರ್ ಹಾಲನ್ನು ನೆಲಕ್ಕೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.ಕೆಲವು ಮಂದಿ ಹಾಲಲ್ಲಿ ಸ್ನಾನ ಮಾಡಿದ್ದಾರೆ.