×
Ad

ಅಂಧತ್ವ,ಸಂಕಷ್ಟಗಳನ್ನು ಮೆಟ್ಟಿನಿಂತ ಸಾಧಕ ನಾಗೇಂದ್ರನ್

Update: 2016-05-14 14:37 IST

ಚೆನ್ನೈ, ಮೇ 11: ಕಳೆದ ಬಾರಿ  ಮೊದಲ ಬಾರಿಗೆ ಶೇ. 100ರಷ್ಟು ಅಂಧತ್ವ ಹೊಂದಿರುವ ಬಿನೊ ಝೆಫಿನ್ ಎಂಬಾಕೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿ ನಿಯುಕ್ತಿಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದರು.ಇದೀಗ ಅವರ ಹೆಜ್ಜೆಯನ್ನು ಅನುಸರಿಸಿಕೊಂಡು ತಮಿಳುನಾಡಿನ ಒಟ್ಟೇರಿಯ  ಶೇ. 100ರಷ್ಟು ಅಂಧತ್ವ ಹೊಂದಿರುವ ಯುವ ಪ್ರತಿಭೆ ಬಾಲ ನಾಗೇಂದ್ರನ್ (27) 2015 ನೆ ಮಂಗಳವಾರ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ 923 ರ್ಯಾಂಕ್ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.ಅವರ ನಾಲ್ಕನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದಾರೆ.

 ಹಲವಾರು ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಈ  ಸಾಧನೆ ಮಾಡಿದ್ದಾರೆ ನಾಗೇಂದ್ರನ್. ಯುಪಿಎಸ್ಸಿ ಪರೀಕ್ಷೆಗೆ ಸಂಬಂಧಿಸಿದ ಬ್ರೈಲ್ ಲಿಪಿಯಲ್ಲಿರುವ  ಪುಸ್ತಕಗಳ ಕೊರತೆಯ ಹಿನ್ನೆಲೆಯಲ್ಲಿ ಅವರ  ಅಧ್ಯಯನಕ್ಕೆ ದೊಡ್ಡ ಹಿನ್ನೆಡೆಯಾಗಿತ್ತು.ಉದಾಹರಣೆಗೆ ಲಕ್ಷ್ಮಿಕಾಂತ್ ಬರೆದಿರುವ ಇಂಡಿಯನ್ ಪಾಲಿಟಿ ಪುಸ್ತಕ ಯುಪಿಎಸ್ಸಿ ಪೂರ್ವಸಿದ್ಧತೆಗೆ ಪ್ರಮುಖವಾದ ಪುಸ್ತಕವಾಗಿದೆ .ಈ ಪುಸ್ತಕದ ವೆಚ್ಚ ಮಾರುಕಟ್ಟೆಯಲ್ಲಿ 410 ರೂ.ಇದೆ. ‘ ಆದರೆ ನಾನು ಬ್ರೈಲ್ ಲಿಪಿಯ ಪ್ರಿಂಟ್ ಔಟ್ ಪಡೆಯಲು ಆರು ಬಾರಿಗಿಂತಲೂ ಹೆಚ್ಚು ಪ್ರಯತ್ನಿಸಬೇಕಾಗಿತ್ತು’’ ಎಂದು ನಾಗೇಂದ್ರನ್ ತಿಳಿಸಿದ್ದಾರೆ.

 ಉಪಯುಕ್ತ ಮಾಹಿತಿಗಳಿರುವ ಶೇ .95 ವೆಬ್ ಸ್ವೆಟ್ ಗಳು ಅಂಧರಿಗೆ ಯಾವುದೇ ರೀತಿಯಲ್ಲಿ ಉಪಯೋಗಕ್ಕೆ ಬರುವುದಿಲ್ಲ.ಆದರೆ ಈ ಅಡೆತಡೆಗಳನ್ನೆಲ್ಲಾ ಎದುರಿಸಿ ಯಶ್ವಸಿಯಾಗಿದ್ದಾರೆ ನಾಗೇಂದ್ರನ್.ಅವರಿಗೆ ಶಿಕ್ಷಣ ಸಚಿವಾಲಯ ಅಥವಾ ವಿಕಲಚೇತನರ ವ್ಯವಹಾರಗಳ ಸಚಿವಾಲಯದ ಉನ್ನತ ಅಧಿಕಾರಿಯಾಗುವ ಗುರಿಯಿದೆ.

  ನಾಗೇಂದ್ರನ್‌ ಪ್ರಕಾರ ವ್ಯವಸ್ಥೆಯಲ್ಲಿ ಸೇರ್ಪಡೆ  ಮತ್ತು ಶಿಕ್ಷಣ ಇವೆರಡೂ ಯಾವುದೇ ವ್ಯಕ್ತಿಯ ಜನ್ಮ ಸಿದ್ಧ ಹಕ್ಕು .

 ಈಶಾನ್ಯ ರಾಜ್ಯದಲ್ಲಿ ಯಾವುದೇ ಸರಕಾರದ ನೆರವಿಲ್ಲದೇ 100 ಕಿ.ಮೀ ನಷ್ಟು ರಸ್ತೆ ನಿರ್ಮಿಸಿರುವ ಪಿಪಲ್ಸ್ ರೋಡ್ ಖ್ಯಾತಿಯ ಐಎಎಸ್ ಅಧಿಕಾರಿ ಅರ್ಮ್‌ಸ್ಟ್ರಾಂಗ್ ಪೆಮೆ ಅವರು ನನಗೆ ಪ್ರೇರಕ ಶಕ್ತಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ.ಕಾಮಾರಾಜ್‌ರವರಿಂದ ಕೂಡ ಸ್ಫೂರ್ತಿಯನ್ನು ಪಡೆದಿದ್ದೇನೆ ಎಂದು ಹೇಳುತ್ತಾರೆ ನಾಗೇಂದ್ರನ್.

     ‘‘ ಬಹುಮುಖ್ಯವಾಗಿ ,ನನ್ನ ತಂದೆ ಅನೇಕ ಕಷ್ಟ ಗಳನ್ನು ಎದುರಿಸಿದ್ದಾರೆ ಪ್ರತಿ ಕಷ್ಟವನ್ನು ಸಹಿಸಿ ನಾನು ಇದ್ದನ್ನು ಸಾಧಿಸಬಲ್ಲೆ ಎಂಬ ಖಾತ್ರಿ ನನ್ನಲಿತ್ತು ಎಂದು ಆನಂದ ಬಾಷ್ಪದೊಂದಿಗೆ  ಸ್ಮರಿಸುತ್ತಾರೆ ನಾಗೇಂದ್ರನ್.

       ನಾಗೇಂದ್ರನ್ರ ತಂದೆ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಇವರು  ಕುಟುಂಬದ ಆದಾಯದ ಮೂಲ. .ಕುಟುಂಬದಲ್ಲಿ ಶಿಕ್ಷಣವನ್ನು ಪಡೆದವರಲ್ಲಿ ಮೊದಲಿಗರೇ ನಾಗೇಂದ್ರನ್. ತನ್ನ ವಿದ್ಯಾಭ್ಯಾಸವನ್ನು ಟಿ.ನಗರದ ರಾಮಕೃಷ್ಣ ಶಾಲೆಯಲ್ಲಿ ಪಡೆದಿದ್ದು,2007ರಲ್ಲಿ ಲೋಯೊಲಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿರುವ ನಾಗೇಂದ್ರನ್ , ಸಂಸ್ಥೆಯ ಇತಿಹಾಸದಲ್ಲಿಯೇ ಮೊದಲನೇಯ ಅಂಧ  ಬಿ.ಕಾಂ ಪದವೀಧರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News