ಜಿಶಾ ಕೊಲೆಪ್ರಕರಣ: ಇನ್ನೊಬ್ಬ ನೆರೆಯ ಯುವಕ ಪೊಲೀಸ್ ವಶಕ್ಕೆ
ಪೆರುಂಬಾವೂರ್, ಮೇ 14: ಜಿಶಾ ಕೊಲೆಪಾತಕಕ್ಕೆ ಸಂಬಂಧಿಸಿ ಓರ್ವ ನೆರೆಯ ವ್ಯಕ್ತಿಯನ್ನೂ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆಂದು ವರದಿಯಾಗಿದೆ. ಶಂಕೆಯ ಆಧಾರದಲ್ಲಿ ಹಲ್ಲಿನ ನಡುವೆ ಎಡೆಯಿರುವ ಯುವಕನನ್ನು ತನಿಖಾ ತಂಡ ಬಂಧಿಸಿದೆ. ಈತನನ್ನು ಈಗ ಪ್ರಶ್ನಿಸಲಾಗುತ್ತಿದೆ.
ಜಿಶಾರ ಬೆನ್ನಲ್ಲಿ ಮಾರಕ ರೀತಿಯಲಿ ಕಚ್ಚಿದ ಹಲ್ಲಿನ ಗುರುತುಗಳಿದ್ದು. ಆ ಹಲ್ಲಿನ ಗುರುತುಗಳ ನಡುವೆ ಸ್ವಲ್ಪ ಅಂತರವಿದೆ. ಆದ್ದರಿಂದ ಹಲ್ಲಿನ ನಡುವೆ ಎಡೆಯಿರುವವರು ಜಿಶಾ ಕೊಲೆಯಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಇಂತಹ ಹಲ್ಲಿರುವ ಹಲವಾರು ಸ್ಥಳೀಯರನ್ನು ಪೊಲೀಸರು ಈಗಾಗಲೇ ಪ್ರಶ್ನಿಸಿದ್ದಾರೆಎಂದು ವರದಿಗಳು ತಿಳಿಸಿವೆ.
ಕಸ್ಟಡಿಗೆತೆಗೆದ ಯುವಕ ಗಾಂಜಾ ದಾಸನಾಗಿದ್ದು ಈ ಯುವಕ ಘಟನೆ ನಡೆದಂದು ಘಟನೆ ನಡೆದ ಸ್ಥಳದಲ್ಲಿಯೇ ಇದ್ದ. ಅದೇವೇಳೆ ಸಾಕ್ಷ್ಯವಾಗಿ ದೊರಕಿರುವ ಒಂದು ಜೊತೆ ಚಪ್ಪಲಿಗಳು ಈತನ ಕಾಲಿಗೆ ಹೊಂದಾಣಿಕೆಯಾಗುತ್ತಿಲ್ಲ.ಚಪ್ಪಲಿಯ ಅಳತೆ ಆರು ಇಂಚಾದರೆ, ಯುವಕನ ಕಾಲಿನ ಅಳತೆ ಹತ್ತು ಇಂಚಾಗಿದೆ.
ಜಿಶಾಕೊಲೆಪಾತಕನಡೆದು ಮೂರುವಾರ ಕಳೆದಿದ್ದರೂ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದಾರೆ. ಮೊದಲು ಜಿಶಾರನ್ನು ಆಕ್ರಮಿಸಿದ್ದ ಯುವಕನ ಹೆಸರು ಮತ್ತು ವಿವರಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಶಾ ತಂದೆ ಪಾಪ್ಪು ಪೊಲೀಸರಿಗೆ ನೀಡಿದ್ದಾರೆಂದು ವರದಿಯಾಗಿದೆ.