ಗುಂಟೂರಿನಲ್ಲಿ ಶಾಪಿಂಗ್ ಮಾಲ್‌ನ ಗೋಡೆ ಕುಸಿತ: ಏಳು ಮಂದಿ ಕಾರ್ಮಿಕರ ಸಾವು!
Update: 2016-05-15 14:24 IST
ವಿಜಯವಾಡ, ಮೇ 15: ಆಂಧ್ರಪ್ರದೇಶದ ಗುಂಟೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮಾಲ್‌ಒಂದರ ಗೋಡೆ ಕುಸಿದ ಪರಿಣಾಮವಾಗಿ ಏಳು ಮಂದಿ ಕೂಲಿ ಕಾರ್ಮಿಕರು ಮೃತರಾಗಿರುವುದಾಗಿ ವರದಿಯಾಗಿದೆ. ಓರ್ವ ಕಾರ್ಮಿಕನನ್ನು ಪವಾಡ ಸದೃಶ್ಯವಾಗಿ ಪಾರು ಮಾಡಲಾಗಿದೆ. ಪೊಲೀಸರು ಈ ಘಟನೆ ನಿನ್ನೆ ರಾತ್ರೆ ನಡೆಯಿತು ಎಂದು ತಿಳಿಸಿದ್ದು ಗುಂಟೂರಿನ ಲಕ್ಷ್ಮೀಪುರಂನಲ್ಲಿ ಒಂದು ಬಹುಮಹಡಿ ಮಾಲ್ ನಿರ್ಮಾಣಕ್ಕಾಗಿ ಮೂವತ್ತು ಅಡಿ ಆಳದ ಗುಂಡಿ ತೋಡುತ್ತಿದ್ದಾಗ ನಡೆಯಿತು ಎಂದಿದ್ದಾರೆ.
ದುರ್ಘಟನೆಯ ಸಮಯದಲ್ಲಿ ಎಂಟು ಮಂದಿ ಕೂಲಿಕಾರ್ಮಿಕರು ಇದ್ದರೆಂದು ಊಹಿಸಲಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯಡ್ಡುರವರು ಉಪಮುಖ್ಯಮಂತ್ರಿ ಎ. ಚಿನ್ನರಾಜಪ್ಪರಿಗೆ ಗುಂಟೂರಿಗೆ ಭೇಟಿ ನೀಡಿ ಪರಿಸ್ಥಿತಿಯ ತಪಾಸಣೆಯನ್ನು ನಡೆಸಲು ಆದೇಶಿಸಿದ್ದಾರೆಂದು ವರದಿಯಾಗಿದೆ.