ಮಾಲೆಗಾಂವ್ ಸ್ಫೋಟ ಪ್ರಕರಣ: ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳು ಆರೆಸ್ಸೆಸ್ ಕಾರ್ಯಕರ್ತರು - ಎನ್‌ಐಎ

Update: 2016-05-16 18:08 GMT

ಮುಂಬೈ, ಮೇ 16: ಮಾಲೆಗಾಂವ್ ಸ್ಫೋಟ(2008) ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ರಾಮಚಂದ್ರ ಕಲ್ಸಂಗ್ರ ಹಾಗೂ ಸಂದೀಪ್ ದಾಂಗೆಯವರನ್ನು ಎನ್‌ಐಎ ಕಳೆದ ವಾರ ದಾಖಲಿಸಿದ ಆರೋಪ ಪಟ್ಟಿಯಲ್ಲಿ ‘ಆರೆಸ್ಸೆಸ್ ಕಾರ್ಯಕರ್ತರು’ ಎಂದು ಉಲ್ಲೇಖಿಸಲಾಗಿದೆ.

ಕಲ್ಸಂಗ್ರೆಯನ್ನು 13ನೆ ಹಾಗೂ ಡಾಂಗೆಯನ್ನು 14ನೆ ಆರೋಪಿಗಳೆಂದು ಹೆಸರಿಸಿರುವ ಎನ್‌ಐಎ ಆರೋಪ ಪಟ್ಟಿಯ ‘ಉದ್ಯೋಗ’ ಎಂಬ ಕಾಲಂನಲ್ಲಿ ‘ಆರೆಸ್ಸೆಸ್ ಕಾರ್ಯಕರ್ತರು’ ಎಂದು ನಮೂದಿಸಿದೆ. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಹೆಸರು ಮುನ್ನೆಲೆಗೆ ಬಂದ ಬಳಿಕ ಅವರಿಬ್ಬರು ತಲೆ ಮರೆಸಿಕೊಂಡಿದ್ದಾರೆ.

ಮಾಲೆಗಾಂವ್ ಸ್ಫೋಟದಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಹೆಸರಿಸಿರುವ ಕುರಿತು ಪ್ರತಿಕ್ರಿಯೆ ಕೇಳಿದಾಗ, ಅವರು ಆರೆಸ್ಸೆಸ್‌ನಲ್ಲಿದ್ದರು. ಅವರ ಚಟುವಟಿಕೆಗಳ ಬಗ್ಗೆ ತಮಗೆ ತಿಳಿದಿಲ್ಲ. ಅವರು ಪ್ರಕರಣದಲ್ಲಿ ಭಾಗಿಗಳಾಗಿರುವ ಕುರಿತೂ ತಿಳಿದಿಲ್ಲವೆಂದು ಆರೆಸ್ಸೆಸ್‌ನ ಪ್ರಧಾನ ವಕ್ತಾರ ಮನಮೋಹನ ವೈದ್ಯ ತಿಳಿಸಿದ್ದಾರೆ.

ನಾವು ಯಾವುದೇ ರೀತಿಯ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ, ಸಂಪೂರ್ಣ ಘಟನೆಯ ಕುರಿತು ಕೂಲಂಕಷ ನ್ಯಾಯಾಂಗ ತನಿಖೆ ನಡೆಯಬೇಕು. ಯಾರೇ ಅಪರಾಧಿಗಳೆಂದು ಕಂಡು ಬಂದರೂ ಅವರನ್ನು ಶಿಕ್ಷಿಸಬೇಕೆಂದು ಅವರು ಹೇಳಿದ್ದಾರೆ.

ಕಲ್ಸಂಗ್ರೆ ಹಾಗೂ ಡಾಂಗೆ ಘೋಷಿತ ಅಪರಾಧಿಗಳಾಗಿದ್ದು, ಅವರ ಕುರಿತಾದ ಮಾಹಿತಿಗೆ ಸಿಬಿಐ ಹಾಗೂ ಎನ್‌ಐಎ ರೂ. 10 ಲಕ್ಷ ಬಹುಮಾನ ಘೋಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News