×
Ad

ಅದೇನು ಅವರಪ್ಪನ ಆಸ್ತಿ ಎಂದು ತಿಳಿದಿದ್ದಾರಾ ?

Update: 2016-05-18 17:40 IST

ಮುಂಬೈ, ಮೇ 18: ಸ್ವಲ್ಪ ಸಮಯದಿಂದ ಕಾಣದೇ ಇದ್ದ  ರಿಷಿ ಕಪೂರ್ ಮತ್ತೆ ಟ್ವಿಟ್ಟರ್ ದರ್ಶನ ನೀಡಿದ್ದಾರೆ. ಅದೂ ತಮ್ಮ ಎಂದಿನ ಮುಲಾಜಿಲ್ಲದ ಟ್ವೀಟ್ ಗಳ ಮೂಲಕ. ಮುಖಕ್ಕೆ ಹೊಡೆದಂತೆ , ನೇರವಾಗಿ ತನಗನಿಸಿದ್ದನ್ನು ಹೇಳಲು ರಿಷಿ ಒಂಚೂರು ಹಿಂಜರಿಯುವುದಿಲ್ಲ . ಈಗ ಮತ್ತೆ ಅದೇ ಮಾಡಿದ್ದಾರೆ. 
ಈ ಬಾರಿ ಅವರ ದಾಳಿಗೆ ತುತ್ತಾಗಿರುವುದು ಕಾಂಗ್ರೆಸ್ ನ ಗಾಂಧೀ ಪರಿವಾರ. ದೇಶದ ಎಲ್ಲ ಮಹತ್ವದ ಯೋಜನೆಗಳಿಗೆ ಗಾಂಧೀ ಕುಟುಂಬದವರ ಹೆಸರನ್ನೇ ಯಾಕೆ ಇಡಬೇಕು ಎಂದು ಪ್ರಶ್ನಿಸಿರುವ ಅವರು ಈಗಾಗಲೇ ಇಟ್ಟಿರುವ ಹೆಸರುಗಳನ್ನು ಬದಲಾಯಿಸಲೂ ಸಲಹೆ ನೀಡಿದ್ದಾರೆ. ಅದೇನು ಅವರಪ್ಪನ ಆಸ್ತಿ ಎಂದು ತಿಳಿದಿದ್ದಾರ ... ಎಂದು ಪ್ರಶ್ನಿಸಿದ್ದಾರೆ. 
ಸಾಲದ್ದಕ್ಕೆ ಅದಕ್ಕೆ ಕೆಲವು ಬದಲಿ ಹೆಸರುಗಳನ್ನೂ ಸೂಚಿಸಿದ್ದಾರೆ. ಭಗತ್ ಸಿಂಗ್, ಅಂಬೇಡ್ಕರ್ ರಿಂದ ಪ್ರಾರಂಭಿಸಿ ಲತಾ ಮಂಗೇಶ್ಕರ್ ,  ದಿಲಿಪ್ ಕುಮಾರ್ , ರಾಜ್ ಕಪೂರ್ , ಅಮಿತಾಭ್ ಬಚ್ಚನ್ , ಕಿಶೋರ್ ಕುಮಾರ್ , ಮೊಹಮ್ಮದ್ ರಫೀ ವರೆಗೆ ಬಂದು ಕೊನೆಗೆ ತಮ್ಮ ಹೆಸರನ್ನೂ ಸೂಚಿಸಿದ್ದಾರೆ ಈ ಮಾಜಿ ಸ್ಟಾರ್ !








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News