ಬುಡಕಟ್ಟು ಮಹಿಳೆಯರನ್ನು ರಕ್ಷಿಸಲು ಒಪ್ಪಂದಗಳಲ್ಲಿ ವಿಧಿಗಳು ಅಗತ್ಯ
ವಿಶ್ವಸಂಸ್ಥೆ, ಮೇ 18: ಸಂಘರ್ಷ ವಲಯಗಳಲ್ಲಿ ಬುಡಕಟ್ಟು ಮಹಿಳೆಯರು ಹಿಂಸಾಚಾರಕ್ಕೆ ಬಲಿಯಾಗುವ ಪ್ರಮಾಣ ಹೆಚ್ಚಾಗಿದೆ, ಹಾಗಾಗಿ, ಬೇರೆಯವರಿಗಿಂತ ಹೆಚ್ಚಾಗಿಯೇ ತುಳಿತಕ್ಕೊಳಗಾಗಿರುವ ಈ ಜನ ಸಮುದಾಯವನ್ನು ರಕ್ಷಿಸುವುದಕ್ಕಾಗಿ ಶಾಂತಿ ಒಪ್ಪಂದಗಳಲ್ಲಿ ಅವರ ವಿಶಿಷ್ಟ ಸ್ಥಿತಿಗತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ವಿಶ್ವಸಂಸ್ಥೆಯ ವಿಶೇಷ ತನಿಖಾಧಿಕಾರಿ ಮಂಗಳವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಬುಡಕಟ್ಟು ಜನರ ಹಕ್ಕುಗಳ ಕುರಿತ ವಿಶೇಷ ರಾಯಭಾರಿ ವಿಕ್ಟೋರಿಯ ಟಾಲಿ-ಕಾರ್ಪಝ್, ಸಂಘರ್ಷ ವಲಯಗಳಲ್ಲಿರುವ ಬುಡಕಟ್ಟು ಮಹಿಳೆಯರ ಭಯಾನಕ ಸ್ಥಿತಿಗತಿಯನ್ನು ಬಿಚ್ಚಿಟ್ಟಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಬುಡಕಟ್ಟು ಜನರು ಸಂಘರ್ಷದ ಎದುರಾಳಿ ಗುಂಪುಗಳ ನಡುವೆ ಸಿಲುಕಿ ನರಳುತ್ತಾರೆ ಹಾಗೂ ಈ ಸಂದರ್ಭಗಳಲ್ಲಿ ಅವರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಹಾಗೂ ಎದುರಾಳಿ ಗುಂಪುಗಳು ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಬಳಸುತ್ತವೆ. ‘‘ಬುಡಕಟ್ಟು ಸಮುದಾಯಗಳನ್ನು ದುರ್ಬಲಗೊಳಿಸಲು ಅತ್ಯಾಚಾರವನ್ನು ಅಸ್ತ್ರವಾಗಿ ಬಳಸಲಾಗುತ್ತದೆ. ಸಂಘರ್ಷ ಸಂಭವಿಸುವಾಗ ತಮ್ಮ ಸ್ಥಳಗಳಲ್ಲಿ ಮಹಿಳೆಯರೇ ಉಳಿಯುತ್ತಾರೆ. ನಾನು ಹಲವು ಸಮುದಾಯಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಯಾವುದೇ ಪುರುಷರು ಉಳಿದಿಲ್ಲ. ಅಲ್ಲಿ ಉಳಿದಿರುವವರು ಮಹಿಳೆಯರು ಮತ್ತು ಮಕ್ಕಳು ಮಾತ್ರ. ಹಾಗಾಗಿ, ಸೇನೆ ಅಲ್ಲಿಗೆ ಬರುವಾಗ ಅವರ ಪೌರುಷಕ್ಕೆ ಸಿಲುಕಿ ನಲುಗುವವರು ಈ ಮಹಿಳೆಯರು’’ ಎಂದು ಟಾಲಿ ಕಾರ್ಪಝ್ ತನ್ನ ವರದಿಯಲ್ಲಿ ಹೇಳಿದ್ದಾರೆ. ಟಾಲಿ ಕಾರ್ಪಝ್ ಸ್ವತಃ ಫಿಲಿಪ್ಪೀನ್ಸ್‌ನ ಕಂಕನೇಯ್ ಇಗೋರಟ್ ಎಂಬ ಬುಡಕಟ್ಟು ಸಮುದಾಯದ ನಾಯಕಿಯಾಗಿದ್ದಾರೆ.
ಅಭಿವೃದ್ಧಿಶೀಲ ದೇಶಗಳ ನಡುವಿನ ಸಹಕಾರಕ್ಕೆ ಬೆಂಬಲ ಅಗತ್ಯ: ವಿಶ್ವಸಂಸ್ಥೆಯಲ್ಲಿ ಭಾರತಶವಿಶ್ವಸಂಸ್ಥೆ, ಮೇ 18: ದಕ್ಷಿಣ-ದಕ್ಷಿಣ ಸಹಕಾರಕ್ಕೆ ವಿಶ್ವಸಂಸ್ಥೆ ಹೆಚ್ಚಿನ ಬೆಂಬಲ ನೀಡಬೇಕು ಎಂಬ ನಿಲುವನ್ನು ಭಾರತ ಹಿಂದಿನಿಂದಲೂ ವ್ಯಕ್ತಪಡಿಸುತ್ತಾ ಬಂದಿದೆ ಎಂದು ವಿಶ್ವಸಂಸ್ಥೆಗೆ ಭಾರತದ ಉಪ ಖಾಯಂ ಪ್ರತಿನಿಧಿ ತನ್ಮಯ ಲಾಲ್ ಹೇಳಿದರು. ಸುಸ್ಥಿರ ಅಭಿವೃದ್ಧಿಯ ಗುರಿ ಹೊಂದಿರುವ 2030ರ ಮಹತ್ವಾಕಾಂಕ್ಷಿ ಜಾಗತಿಕ ಕಾರ್ಯಸೂಚಿಯನ್ನು ಸಾಧಿಸಲು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ದೇಶಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯವನ್ನು ಭಾರತ ಪ್ರತಿಪಾದಿಸುತ್ತಾ ಬಂದಿದೆ ಎಂದರು.
‘‘ದಕ್ಷಿಣ-ದಕ್ಷಿಣ ಸಹಕಾರ ಎಂದರೆ, ಒಂದೇ ರೀತಿಯ ಸವಾಲುಗಳನ್ನು ಹೊಂದಿರುವ ಹಾಗೂ ಅಭಿವೃದ್ಧಿ ಸಾಧಿಸಲು ಹೆಚ್ಚು ಕಡಿಮೆ ಒಂದೇ ವಿಧಾನಗಳನ್ನು ಅನುಸರಿಸುತ್ತಿರುವ ದೇಶಗಳ ನಡುವಿನ ಸಹಕಾರವಾಗಿದೆ’’ ಎಂದು ಮಂಗಳವಾರ ನಡೆದ ದಕ್ಷಿಣ-ದಕ್ಷಿಣ ಸಹಕಾರದ ಉನ್ನತ ಮಟ್ಟದ ಸಭೆಯೊಂದರಲ್ಲಿ ತನ್ಮಯಲಾಲ್ ಹೇಳಿದರು.
‘‘ಪುನರ್ ನಿರೂಪಿತ ಜಾಗತಿಕ ಭಾಗೀದಾರಿಕೆಯ ಪ್ರಧಾನ ನೂತನ ಅಂಶವಾಗಿ ದಕ್ಷಿಣ-ದಕ್ಷಿಣ ಸಹಕಾರಕ್ಕೆ ನೀಡಲಾಗುತ್ತಿರುವ ಅತೀವ ಒತ್ತು ಸರಿಯಾಗಿಲ್ಲ. ವಾಸ್ತವವಾಗಿ, ನೂತನ ಕಾರ್ಯಸೂಚಿಯ ಈಡೇರಿಕೆಗಾಗಿ ಉತ್ತರ-ದಕ್ಷಿಣ ಸಹಕಾರವನ್ನು ಬಲಪಡಿಸಬೇಕಾಗಿದೆ’’ ಎಂದು ತನ್ಮಯ ಅಭಿಪ್ರಾಯಪಟ್ಟರು.