ಟಿಎಂಸಿ ಶಾಸಕಾಂಗ ನಾಯಕಿಯಾಗಿ ಮಮತಾ
Update: 2016-05-20 23:52 IST
ಕೋಲ್ಕತಾ,ಮೇ 20: ತೃಣಮೂಲ ಕಾಂಗ್ರೆಸ್‌ನ ಶಾಸಕಾಂಗ ಪಕ್ಷ ನಾಯಕಿಯಾಗಿ ಮಮತಾ ಬ್ಯಾನರ್ಜಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದ್ದಾರೆ.
ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಪಾರ್ಥ ಚಟರ್ಜಿ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಮಮತಾ ಅವರ ಹೆಸರನ್ನು ಪ್ರಸ್ತಾಪಿಸಿದರು. ಆಗ ಉಳಿದ ಎಲ್ಲಾ ನೂತನ ಟಿಎಂಸಿ ಶಾಸಕರು ಅದನ್ನು ಅನುಮೋದಿಸಿದರು.
ಆನಂತರ ಮಮತಾ ಬ್ಯಾನರ್ಜಿ, ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾದರು.