ಕನ್ಯಾಕುಮಾರಿ ಸಮೀಪ ಹಳಿತಪ್ಪಿದ ಅಸ್ಸಾಂ ರೈಲು
Update: 2016-05-20 23:53 IST
ತಿರುವನಂತಪುರ,ಮೇ 20: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಉಂಟಾದ ಭಾರೀ ಭೂಕುಸಿತದಿಂದಾಗಿ ಶುಕ್ರವಾರ ಅಸ್ಸಾಂಗೆ ಪ್ರಯಾಣಿಸುತ್ತಿದ್ದ ರೈಲೊಂದರ ಇಂಜಿನ್ ಹಳಿತಪ್ಪಿದೆ. ಆದರೆ ಅವಘಡದಲ್ಲಿ ಯಾರೂ ಗಾಯಗೊಂಡಿಲ್ಲವೆಂದು ತಿಳಿದುಬಂದಿದೆ.
ಕನ್ಯಾಕುಮಾರಿ-ದಿಬ್ರೂಗಢ ಎಕ್ಸ್‌ಪ್ರೆಸ್ ಶುಕ್ರವಾರ ಮುಂಜಾನೆ 1:10ಕ್ಕೆ ಎರಾನಿಲ್ ರೈಲ್ದಾಣವನ್ನು ಹಾದುಹೋದ ಬಳಿಕ ಮಾರ್ಗಮಧ್ಯೆ ಸಂಭವಿಸಿದ ಭೂಕುಸಿತದಿಂದಾಗಿ ಅದರ ಇಂಜಿನ್ ಹಳಿತಪ್ಪಿತೆಂದು, ದಕ್ಷಿಣ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವೆಂದು ತಿಳಿದುಬಂದಿದೆ. ಅಪಘಾತದ ಸ್ಥಳಕ್ಕೆ ವಿಭಾಗೀಯ ರೈಲ್ವೆ ಮ್ಯಾನೇಜರ್ ಹಾಗೂ ಮರುಸ್ಥಾಪನೆ ದಳವು ಧಾವಿಸಿದ್ದು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.