×
Ad

ಸ್ಥಾನಮಾನಗಳನ್ನು ಬಯಸುವುದಿಲ್ಲ, ಜನರ ಹಿತರಕ್ಷಕನಾಗಿ ಮುಂದುವರಿಯುವೆ: ವಿಎಸ್ ಅಚ್ಯುತಾನಂದನ್

Update: 2016-05-21 12:29 IST

 ತಿರುವನಂತಪುರಂ, ಮೇ 21: ಪಕ್ಷವನ್ನು ಪೇಚಿಗೆ ಸಿಕ್ಕಿಸುವ ಯಾವ ಪ್ರಶ್ನೆಗಳಿಗೂ ವಿ.ಎಸ್ ಅಚ್ಯುತಾನಂದನ್ ಉತ್ತರಿಸಲಿಲ್ಲ. ಯಾವುದೇ ಸ್ಥಾನಗಳನ್ನು ಬಯಸುವುದಿಲ್ಲ. ಜನರ ಕಾವಲಾಳಗಾಗಿ(ಜನರ ಹಿತರಕ್ಷಕನಾಗಿ) ತಿರುವನಂತಪುರದಲ್ಲಿ ಮುಂದುವರಿಯಲ್ಲಿದ್ದೇನೆ ಎಂದು ಅಚ್ಯುತಾನಂದನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸಿಪಿಎಂ ಅಥವಾ ನಿಯೋಜಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ವಿವಾದಕ್ಕೆ ಸಿಲುಕಿಸದೆ ಅವರು ಜಾಣತನದಿಂದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಪ್ರತಿಪಕ್ಷ ನಾಯಕನ ಸ್ಥಾನದಿಂದ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಕೃತಜ್ಞತೆ ಹೇಳಲು ಬಯಸುತ್ತಿದ್ದೇನೆ. ಈ ಸಮಯದಲ್ಲಿ ಇತರ ಪ್ರಶ್ನೆಗಳಿಗೆ ಪ್ರಾಮುಖ್ಯವಿಲ್ಲ ಎಂದು ವಿ,ಎಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News