ಈ ಮರದಿಂದ 5 ಮನೆಗಳಿಗೆ ವಿದ್ಯುತ್ ಸೌಲಭ್ಯ!

Update: 2016-05-22 06:39 GMT

ಜಗತ್ತು ಈಗ ಪರ್ಯಾಯ ವಿದ್ಯುತ್ ಮೂಲಗಳನ್ನು ಹುಡುಕುತ್ತಿದೆ. ಪಶ್ಚಿಮ ಬಂಗಾಳದ ಪ್ರಯೋಗಾಲಯ CSIR ಈ ನಿಟ್ಟಿನಲ್ಲಿ ತನ್ನ ಕೊಡುಗೆಯನ್ನು ನೀಡಿದೆ. ಈ ಪ್ರಯೋಗಾಲಯದಲ್ಲಿ ಸೋಲಾರ್ ವಿದ್ಯುತ್ ಮರವನ್ನು ಸೃಷ್ಟಿಸಲಾಗಿದೆ. ಇದು ನಾಲ್ಕು ಚದರ ಅಡಿಗಿಂತ ದೊಡ್ಡದಾಗಿಲ್ಲ. ಆದರೆ ಮೂರು ಕಿಲೋ ವ್ಯಾಟ್ ಶಕ್ತಿ ಉತ್ಪಾದಿಸುತ್ತದೆ. ಇದನ್ನು ಐದು ಗಂಟೆಗಳ ಕಾಲ ಬಳಸಲು ಸಾಧ್ಯವಿದೆ.

ಪಶ್ಚಿಮ ಬಂಗಾಳದ ದುರ್ಗಾಪುರದ ಸೆಂಟ್ರಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ರೀಸರ್ಚ್ ಇನಸ್ಟಿಟ್ಯೂಟ್ (CMERI) ನ ಮುಖ್ಯ ವಿಜ್ಞಾನಿ ಸಿಬ್ನಾತ್ ಮೈಟಿ ಈ ಮರವನ್ನು ವಿನ್ಯಾಸಗೊಳಿಸಿದ್ದಾರೆ. ಕನಿಷ್ಠ ಭೂಮಿಯಲ್ಲಿ ಹೆಚ್ಚು ಸೋಲಾರ್ ವಿದ್ಯುತ್ ಉತ್ಪಾದಿಸುವ ವಿನ್ಯಾಸವನ್ನು ರೂಪಿಸುವುದೇ ದೊಡ್ಡ ಸವಾಲು ಎನ್ನುತ್ತಾರೆ ಸಿಬ್ನಾತ್. ಒಂದು ಮೆಗಾವ್ಯಾಟ್ ವಿದ್ಯುತ್ತಿಗೆ ಐದು ಎಕರೆಗಳ ಭೂಮಿಯ ಅಗತ್ಯವಿದೆ. 10,000 ಮೆಗಾವ್ಯಾಟ್ ಉತ್ಪಾದಿಸಲು 50,000 ಎಕರೆಗಳ ಜಾಗ ಬೇಕು. ಇದರಿಂದಾಗಿ ಪಶ್ಚಿಮ ಬಂಗಾಳ ಮತ್ತು ಬಿಹಾರ ಈ ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಿದೆ ಎಂದು ಅವರು ಹೇಳುತ್ತಾರೆ.

ಸೋಲಾರ್ ಮರ ಎಂದರೇನು?

ಮೂರು ಕಿಲೋವ್ಯಾಟ್ ಸಾಧನವು ಮರದ ರೀತಿಯಲ್ಲಿದ್ದು ವಿಭಿನ್ನ ಹಂತಗಳಾದ ಕೊಂಬೆಗಳೂ ಇವೆ. ಇವುಗಳನ್ನು ಮನೆ ಮೇಲ್ಗಡೆ ಮತ್ತು ಹೆದ್ದಾರಿಗಳಲ್ಲಿ ಇಡಬಹುದು. ಈ ಮರಕ್ಕೆ ಕೇವಲ ನಾಲ್ಕು ಚದರ ಅಡಿ ಜಾಗ ಸಾಕು. ವಿಜ್ಞಾನಿಗಳು ಐದು ಕಿಲೋ ವ್ಯಾಟ್ ನ ಪಾರಂಪರಿಕ ಸೋಲಾರ್ ಫೋಟೋ ವೊಲ್ಟಾಕ್ ಸಿಸ್ಟಮನ್ನು 400 ಚದರ ಅಡಿ ಜಾಗದಲ್ಲಿ ಇರಿಸಿರುವುದು ದೊಡ್ಡ ವಿಷಯ. ಬ್ಯಾಟರಿ ಬ್ಯಾಕಪ್ ಜೊತೆಗೆ ಇದನ್ನು ಅಳವಡಿಸಿಕೊಳ್ಳಲು ರು. 3 ಲಕ್ಷ ಬೇಕು.

ಸೋಲಾರ್ ಮರವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಉದ್ಘಾಟಿಸಿದ್ದಾರೆ. ಸಚಿವರ ಕಚೇರಿ ಮತ್ತು ಬಂಗಲೆಯಲ್ಲೂ ಕೆಲವು ಮರಗಳನ್ನು ಇಡಲು ಅವರು ಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News