×
Ad

ನಿಮ್ಮನ್ನು ನಿರ್ಭಯಾಳಂತೆ ಅತ್ಯಾಚಾರ ಮಾಡಿ ಕೊಲ್ಲಲಾಗುವುದು

Update: 2016-05-22 18:34 IST

ಹೊಸದಿಲ್ಲಿ, ಮೇ 22: ಭಾರತ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿಗೆ ಮೈಕ್ರೊ ಬ್ಲಾಗಿಂಗ್‌ನಲ್ಲಿ ರಾಜೀವ್ ಅಗ್ರವಾಲ್(@rajagra 1421 ) ಎಂಬ ವ್ಯಕ್ತಿಯೊಬ್ಬ ’ನಿಮ್ಮನ್ನು ನಿರ್ಭಯಾಳಂತೆ ಅತ್ಯಾಚಾರ ಮಾಡಲಾಗುವುದು ಮತ್ತು ಅವಳಂತೆ ನೀವು ಸಾಯಲಿರುವಿರಿ. ಮೇಡಮ್ ನೀವು ಯಾಕೆ ರಾಹುಲ್ ಗಾಂಧಿಗೆ ಲಿವ್ ಇನ್ ಪಾರ್ಟನರ್ ಆಗಿಲ್ಲ?’ ಎಂದು ಬರೆದಿದ್ದಾನೆ. ಇದರ ನಂತರ ಪ್ರಿಯಾಂಕ ಸೋಶಿಯಲ್ ಮೀಡಿಯದಲ್ಲಿ ಮಹಿಳೆಯರೊಂದಿಗೆ ನಡೆಯುತ್ತಿರುವ ಅಸುರಕ್ಷಿತ ವರ್ತನೆಗಳ ಬಗ್ಗೆ ಲೇಖನ ಬರೆದಿದ್ದಾರೆ. ಈ ಲೇಖನದಲ್ಲಿ ತನ್ನನ್ನು ನಿರ್ಭಯಾಳಂತೆ ರೇಪ್ ಮಾಡಿ ಕೊಲ್ಲುವ ಬೆದರಿಕೆ ಹಾಕಲಾಗಿದೆ. ಬಿಜೆಪಿಯ ವಕ್ತಾರ ಮಾಡಿದ ಆರೋಪ ವಿರುದ್ಧ ತಾನು ಸವಾಲು ಹಾಕಿದ್ದು ಕಾರಣವೆಂದು ಅವರು ಬರೆದಿದ್ದಾರೆ.

ಪ್ರಿಯಾಂಕರ ಒಂದು ಟ್ವೀಟ್ ಕುರಿತು ಇತ್ತೀಚೆಗೆ ಬಂದಿರುವ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ ಚರ್ಚೆ ನಡೆಯುತ್ತಿತ್ತು. ಇದರಲ್ಲಿ ಬಿಜೆಪಿ ಬೆಂಬಲಿಗ ರಾಜೀವ್ ಅಗ್ರವಾಲ್ ಎಂಬಾತ ಕೂಡಾ ಭಾಗವಹಿಸಿದ್ದ. ರಾಜೀವ್ ಚರ್ಚೆಯಲ್ಲಿ ದುರ್ಬಲನಾಗುತ್ತಾ ಹೋದಾಗ ಕೆಟ್ಟ ಭಾಷೆಯನ್ನು ಬಳಸಿ ಪ್ರಿಯಾಂಕಾರನ್ನು ರೇಪ್ ಮಾಡುವ ಬೆದರಿಕೆಯನ್ನು ಹಾಕಿದ್ದಾನೆ.

ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ದೂರು ನೀಡಲಾಗಿದೆ. ಅವನನ್ನು ಅತೀಶೀಘ್ರ ಸೆರೆಹಿಡಿಯಲು ಹೇಳಲಾಗಿದೆ ಎಂದು ಪ್ರಿಯಾಂಕಾ ಬರೆದಿದ್ದಾರೆ. ಇಷ್ಟೇ ಅಲ್ಲ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವ ಅರುಣ್ ಜೆಟ್ಲಿಯವರಿಗೆ ಮಹಿಳೆಯರ ವಿರುದ್ಧ ಸೋಶಿಯಲ್ ಮೀಡಿಯದಲ್ಲಿ ಇಂತಹ ಬರಹಗಳು ಪ್ರಕಟವಾಗದಂತೆ ಕಠಿಣ ಕಾನೂನು ರೂಪಿಸಬೇಕೆಂದು ಪ್ರಿಯಾಂಕಾಸಲಹೆನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News