×
Ad

ಲ್ಯಾಪ್ ಟಾಪ್ ಚಾರ್ಜರ್ ನಿಂದ ವಿದ್ಯುತ್ ಆಘಾತ , ಯುವಕ ಬಲಿ

Update: 2016-05-24 12:56 IST

ಹೊಸದಿಲ್ಲಿ, ಮೇ 24: ದೆಹಲಿಯ ತುಘ್ಲಕಾಬಾದ್ ಎಕ್ಸ್ ಟೆನ್ಶನ್ ಪ್ರದೇಶದ ನಿವಾಸಿಯಾದ 23 ವರ್ಷದ ಯುವಕನೊಬ್ಬ ತನ್ನ ಮನೆಯಲ್ಲಿ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವಾಗ ಅದರ ಚಾರ್ಜರ್ ನಿಂದ ಉಂಟಾದ ವಿದ್ಯುತ್ ಆಘಾತದಿಂದ ಬಲಿಯಾದ ಘಟನೆ ವರದಿಯಾಗಿದೆ.

ಮೃತ ಯುವಕ ಬೃಜೇಶ್ ಕುಮಾರ್ ಫರೀದಾಬಾದ್ ನಲ್ಲಿ ರಫ್ತು ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟರೆಂದು ವೈದ್ಯರು ಹೇಳಿದ್ದಾರೆ.

ಆತನ ಮನೆಗೆ ತನಿಖೆಗೆ ಆಗಮಿಸಿದ ಅಧಿಕಾರಿಗಳು ಆತ ಲ್ಯಾಪ್ ಟಾಪ್ ಚಾರ್ಜ್ ಮಾಡಲು ಎಕ್ಸ್ ಟೆನ್ಶನ್ ಕೋರ್ಡ್ ಬಳಸಿದ್ದನೆಂದು ಹಾಗೂ ಅದರಿಂದ ವಿದ್ಯುತ್ ಆಘಾತ ಉಂಟಾಯಿತೆಂದು ಹೇಳಿದ್ದಾರೆ.

ಬೃಜೇಶ್ ಪತ್ನಿ ಘಟನೆಯಿಂದ ಆಘಾತಗೊಂಡಿದ್ದರಿಂದ ಆಕೆ ಪೊಲೀಸರ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರಿಸಬೇಕಾಗಿದೆ.

ಲ್ಯಾಪ್ ಟಾಪನ್ನು ವಶಪಡಿಸಿಕೊಂಡಿರುವ ಪೊಲೀಸರು ಅದನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದಾರೆ. ವದಂತಿಗಳು ಹರಡಿದಂತೆ ಲ್ಯಾಪ್ ಟಾಪ್ ನಲ್ಲಿ ಯಾವುದೇ ಸ್ಫೋಟವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಬೃಜೇಶ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಆತನ ಹೆತ್ತವರು ಅದೇ ಕಟ್ಟಡದ ಪ್ರಥಮ ಮಹಡಿಯಲ್ಲಿ ವಾಸಿಸುತ್ತಿದ್ದರು. ಬೃಜೇಶ್ ಗೆ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ವಿವಾಹವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News