ಪಾಕ್ ನೌಕಾಪಡೆಯ ಐವರು ಅಧಿಕಾರಿಗಳಿಗೆ ಮರಣದಂಡನೆ: ಪಾಕ್ ಸೇನಾ ಕೋರ್ಟ್ ತೀರ್ಪು

Update: 2016-05-24 17:42 GMT


ಇಸ್ಲಾಮಾಬಾದ್, ಮೇ 24: ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ್ದರೆನ್ನಲಾದ, ಪಾಕಿಸ್ತಾನದ ನೌಕಾಪಡೆಯ ಐವರು ಅಧಿಕಾರಿಗಳಿಗೆ ಪಾಕಿ ಸ್ತಾನದ ಸೇನಾ ನ್ಯಾಯಾಲಯವು ಮಂಗಳವಾರ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ಅಮೆರಿಕ ನೌಕಾಪಡೆಯ ಇಂಧನ ತುಂಬಿಸುವ ಹಡಗೊಂದರ ಮೇಲೆ ದಾಳಿ ನಡೆಸಲು ಅವರು ಪಾಕ್ ಸಮ ರನೌಕೆ 'ಪಿಎನ್‌ಎಸ್ ಝುಲ್ಫಿಕರ್' ಅನ್ನು ಅಪಹರಿಸಲು ಸಂಚು ಹೂಡಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಸೇನಾ ನ್ಯಾಯಾಲಯವು ಈ ಅಧಿಕಾರಿಗಳ ವಿಚಾರಣೆಯನ್ನು ರಹಸ್ಯವಾಗಿ ನಡೆಸಿತ್ತು.
 ಕರಾಚಿಯ ನೌಕಾಪಡೆಯ ಡಾಕ್‌ಯಾರ್ಡ್ ಮೇಲೆ 2014ರ ಸೆಪ್ಟಂಬರ್ 6ರಂದು ನಡೆದ ದಾಳಿ ಪ್ರಕರಣಲ್ಲಿ ಸಬ್ ಲೆಫ್ಟಿನೆಂಟ್ ಹಮ್ಮದ್ ಅಹ್ಮದ್ ಹಾಗೂ ಇತರ ನಾಲ್ವರು ನೌಕಾಡೆಯ ಅಧಿಕಾರಿಗಳು ದೋಷಿಗಳೆಂದು ಸಾಬೀತಾಗಿತ್ತು. ಈ ದಾಳಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದು, ಉಳಿದ ನಾಲ್ವರು ಭದ್ರತಾಪಡೆಗಳಿಗೆ ಸಿಕ್ಕಿಬಿದ್ದಿದ್ದರು. 'ಈ ಐವರ ವಿರುದ್ಧ ಐಸಿಸ್ ಜೊತೆ  ಂಟು, ದಂಗೆ, ಸಂಚು ರೂಪಿಸಿದ ಮತ್ತು ನೌಕಾಪಡೆಯ ಹಡಗುಕಟ್ಟೆ (ಡಾಕ್‌ಯಾ
ರ್ಡ್)ಗೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ದ ಆರೋಪಗಳನ್ನು ಹೊರಿಸಲಾಗಿತ್ತು.
 ಸಬ್‌ಲೆಫ್ಟಿನೆಂಟ್ ಹಮ್ಮದ್ ಅಹ್ಮದ್ ಸೇರದಂತೆ ಐವರು ನೌಕಾಪಡೆಯ ಅಧಿಕಾರಿಗಳಿಗೆ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿರುವುದನ್ನು ಹಮ್ಮದ್ ಅಹ್ಮದ್‌ನ ತಂದೆ ನಿವೃ್ತ ಸೇನಾ
    
 ಧಿಕಾರಿ ಮೇಜರ್ ಸಯೀದ್ ಅಹ್ಮದ್, ಪಾಕ್ ದಿನಪತ್ರಿಕೆ ಡಾನ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ನೌಕಾಪಡೆಯ ನ್ಯಾಯಾಲಯವು ತನ್ನ ಪುತ್ರನ ವಿಚಾರಣೆಯನ್ನು ನ್ಯಾಯಯುತವಾಗಿ ನಡೆಸಿಲ್ಲವೆಂದು ಮೇಜರ್ ಸಯೀದ್ ಅಹ್ಮದ್ ಆಪಾದಿಸಿದ್ದಾರೆ. ತನ್ನ ಪುತ್ರನ ಪರವಾಗಿ ವಾದಿಸಲು ಪ್ರತಿವಾದಿ ವಕೀಲರೊಬ್ಬರನ್ನು ನೇಮಿಸುವ ಅವಕಾಶವನ್ನು ನೀಡುವಂತೆ ತಾನು ಕಳೆದ ವರ್ಷದ ಆಗಸ್ಟ್ 2015ರಂದು ನೌಕಾಪಡೆಯ ಅಡ್ವೊಕೇಟ್ ಜನರಲ್‌ಗೆೆ ಪತ್ರ ಬರೆದಿದ್ದೆ. ಅವರು ಸೆ.21ರಂದು ಈ ಬಗ್ಗೆ ಬರೆದ ಪತ್ರವೊಂದರಲ್ಲಿ ವಿಚಾರಣೆಯ ವೇಳೆ ಪ್ರತಿವಾದಿ ವಕೀಲರನ್ನು ನೇಮಿಸಲಾಗುವುದೆಂದು ಉತ್ತರಿಸಿದ್ದರು. ವಿಚಾರಣೆಯ ಆರಂಭಕ್ಕಾಗಿ ತಾನು ಕಾಯುತ್ತಿರುವಾಗಲೇ, ಪುತ್ರನನ್ನು ಕರಾಚಿಯ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆಯೆಂದು ತಮಗೆ ಮಾಹಿತಿ ದೊರೆತಿತ್ತೆಂದು ಅವರು ಹೇಳಿದ್ದಾರೆ.
  ತಾನು ಇತ್ತೀಚೆಗೆ ಪುತ್ರನನ್ನು ಭೇಟಿಯಾಗಲು ಕರಾಚಿಯ ಸೇನಾ ನ್ಯಾಯಾಲಯಕ್ಕೆ ತೆರಳಿದ ಸಂದರ್ಭದಲ್ಲಷ್ಟೇ ತನ್ನ ಪುತ್ರ ಹಾಗೂ ಆತನ ಸಹದ್ಯೋಗಿಗಳಾದ ಇರ್ಫಾನುಲ್ಲಾ, ಮುಹಮ್ಮದ್ ಹಮ್ಮದ್, ಅರ್ಸಲಾನ್ ನಝೀರ್ ಹಾಗೂ ಹಾಶಿಂ ನಸೀರ್‌ಗೆ ಮರಣದಂಡನೆ ವಿಧಿಸಿರುವ ವಿಚಾರ ತಿಳಿದುಬಂದಿತೆಂದು ಅವರು ಹೇಳಿದ್ದಾರೆ. ನೌಕಾಪಡೆ ಹಡಗಿನ ಮೇಲೆ ದಾಳಿ ನಡೆದ ಪ್ರಕರಣದಲ್ಲಿ ತನ್ನ ಪುತ್ರ ಹಾಗೂ ಇತರ ನಾಲ್ವರು ಸೇನಾಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆಯೆಂದು ಸಯೀದ್ ಆಪಾದಿಸಿದ್ದಾರೆ.ತೀರ್ಪಿನ ವಿರುದ್ಧ ತಾನು ನೌಕಾಪಡೆಯ ಸೇನಾನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಆದರೆ ತನ್ನ ಐವರು ಅಧಿಕಾರಿಗಳಿಗೆ ಮರಣಂದಡನೆ ವಿಧಿಸಲಾಗಿರುವ ಬಗ್ಗೆ ಪಾಕ್ ನೌಕಾಪಡೆಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News