ಯೇಲ್ ವಿವಿಯಲ್ಲಿ ಜನಾಂಗೀಯ ತಾರತಮ್ಯ

Update: 2016-05-24 17:53 GMT

ನ್ಯೂಯಾರ್ಕ್, ಮೇ 24: ಅಮೆರಿಕದ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಪ್ರಕ್ರಿಯೆಯಲ್ಲಿ ಜನಾಂಗೀಯ ನೆಲೆಯಲ್ಲಿ ತಾರತಮ್ಯವೆಸಲಾಗುತ್ತಿರುವ ಬಗ್ಗೆ ತನಿಖೆ ನಡೆಸಬೇಕೆಂದು ಎರಡು ಭಾರತೀಯ ಅಮೆರಿಕನ್ ಗುಂಪುಗಳು ಸೇರಿದಂತೆ 130 ಏಶ್ಯನ್ ಅಮೆರಿಕನ್ ಸಂಘಟನೆಗಳ ಒಕ್ಕೂಟವು ಆಗ್ರಹಿಸಿದೆ.
 ಅಮೆರಿಕನ್ ಭಾರತೀಯರ ಸಂಘಟನೆಗಳಾದ, 'ಅಮೆರಿಕನ್ ಸೊಸೈಟಿ ಆಫ್ ಇಂಜಿನಿಯರ್ಸ್‌ ಆಫ್ ನ್ಯಾಶನಲ್ ಕ್ಯಾಪಿಟಲ್ ಚಾರ್ಟರ್' ಹಾಗೂ 'ಗ್ಲೋಬಲ್ ಆರ್ಗನೈಸೇಶನ್ ಆಫ್ ಲಾಸ್‌ಏಂಜಲೀಸ್ ಚಾಪ್ಟರ್', 130ಕ್ಕೂ ಅಧಿಕ ಏಶ್ಯನ್-ಅಮೆರಿಕನ್ ಸಂಘಟನೆಗಳ ಒಕ್ಕೂಟ 'ಏಶ್ಯನ್-ಅಮೆರಿಕನ್ ಶಿಕ್ಷಣ ಮೈತ್ರಿಕೂಟ '(ಎಎಸಿಇ)ದ ಜೊತೆ ಕೈಜೋಡಿಸಿ ಯೇಲ್ ವಿವಿ, ಬ್ರೌನ್ ವಿವಿ ಹಾಗೂ ಡರ್ವೌಟ್ ಕಾಲೇಜ್ ವಿರುದ್ಧ ಅಮೆರಿಕನ್ ಶಿಕ್ಷಣ ಹಾಗೂ ನ್ಯಾಯಾಂಗ ಇಲಾಖೆಗೆ ಸೋಮವಾರ ದೂರು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News