ಎಬಿಡಿ-ಇಕ್ಬಾಲ್ ಸಾಹಸ; ರಾಯಲ್ ಚಾಲೆಂಜರ್ಸ್‌ ಫೈನಲ್‌ಗೆ

Update: 2016-05-24 18:54 GMT


  ಬೆಂಗಳೂರು, ಮೇ 24: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ಗುಜರಾತ್ ಲಯನ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಗಳಿಸಿ ಫೈನಲ್ ತಲುಪಿದೆ.
ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 159 ರನ್ ಮಾಡಬೇಕಿದ್ದ ರಾಯಲ್ ಚಾಲೆಂಜರ್ಸ್‌ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಎಬಿಡಿವಿಲಿಯರ್ಸ್‌ ಔಟಾಗದೆ 79 ರನ್(47ಎ, 5ಬೌ,5ಸಿ) ಮತ್ತು ಇಕ್ಬಾಲ್ ಅಬ್ದುಲ್ ಔಟಾಗದೆ 33ರನ್(25ಎ, 3ಬೌ,1ಸಿ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
 
 ಧವಳ್ ಕುಲಕರ್ಣಿ (14ಕ್ಕೆ 4) ಮತ್ತು ರವೀಂದ್ರ ಜಡೇಜ(21ಕ್ಕೆ2) ದಾಳಿಗೆ ಸಿಲುಕಿ ಒಂದು ಹಂತದಲ್ಲಿ ಆರ್‌ಸಿಬಿ 29ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಎಬಿಡಿ ಮತ್ತು ಬಿನ್ನಿ ಜೊತೆಯಾಟದಲ್ಲಿ 39 ರನ್ ಸೇರಿಸಿದರು. ಬಿನ್ನಿ 21 ರನ್ ಗಳಿಸಿದರು. ಬಳಿಕ ಎಬಿಡಿ ಮತ್ತು ಇಕ್ಬಾಲ್ ಅಬ್ದುಲ್ಲ ಮುರಿಯದ ಜೊತೆಯಾಟದಲ್ಲಿ 91 ರನ್ ಸೇರಿಸಿ ಆರ್‌ಸಿಬಿ ತಂಡವನ್ನು ಮೂರನೆ ಬಾರಿ ಫೈನಲ್ ತಲುಪಿಸಿದರು. ಈ ಮೊದಲು ಆರ್‌ಸಿಬಿ 2009 ಮತ್ತು 2011ರಲ್ಲಿ ಫೈನಲ್ ಪ್ರವೇಶಿಸಿತ್ತು.
 ಗುಜರಾತ್ 158/10: ಗುಜರಾತ್ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 158 ರನ್‌ಗಳಿಗೆ ಆಲೌಟಾಗಿತ್ತು.
ಡ್ವೇಯ್ನ ಸ್ಮಿತ್ 73ರನ್(41ಎ, 5ಬೌ,6ಸಿ) ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಯನ್ಸ್ ತಂಡ ಆರಂಭದಲ್ಲಿ ರನ್ ಗಳಿಸಲು ಪರದಾಡಿತು. ಆರ್‌ಸಿಬಿಯ ಸಂಘಟಿತ ದಾಳಿಗೆ ಸಿಲುಕಿ 3.4 ಓವರ್‌ಗಳಲ್ಲಿ 9 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.
 ಇಕ್ಬಾಲ್ ಅಬ್ದುಲ್ಲ(2-38) ಶೇನ್ ವ್ಯಾಟ್ಸನ್(4-29), ಜೋರ್ಡನ್ (2-26)ಮತ್ತು ಚಾಹಲ್(1-42) ದಾಳಿಯನ್ನು ಎದುರಿಸಲಾರದೆ ಆರಂಭಿಕ ದಾಂಡಿಗ ಆ್ಯರೊನ್ ಫಿಂಚ್ (4), ಬ್ರೆಂಡನ್ ಮೆಕಲಮ್(1), ನಾಯಕ ಸುರೇಶ್ ರೈನಾ(1) ಔಟಾಗಿ ಪೆವಿಲಿಯನ್ ಸೇರಿದರು.
ನಾಲ್ಕನೆ ವಿಕೆಟ್‌ಗೆ ದಿನೇಶ್ ಕಾರ್ತಿಕ್ ಮತ್ತು ಡ್ವೇಯ್ನ ಸ್ಮಿತ್ ಜೊತೆಯಾಗಿ 85 ರನ್‌ಗಳ ಕೊಡುಗೆ ನೀಡಿದರು. ದಿನೇಶ್ ಕಾರ್ತಿಕ್ 26 ರನ್(30ಎ, 2ಬೌ) ಗಳಿಸಿದರು. 13.5 ಓವರ್‌ಗಳಲ್ಲಿ ತಂಡದ ಸ್ಕೋರ್ 94ಕ್ಕೆ ತಲುಪುವಾಗ ಕಾರ್ತಿಕ್ ಅವರು ಜೋರ್ಡನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ರವೀಂದ್ರ ಜಡೇಜ( 3) ವಿಫಲರಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ಕಡೆ ಸ್ಮಿತ್ ತಂಡಕ್ಕೆ ಆಸರೆಯಾದರು. 16.3ನೆ ಓವರ್‌ನಲ್ಲಿ ತಂಡದ ಸ್ಕೋರ್ 115ಕ್ಕೆ ತಲುಪುವಾಗ ಸ್ಮಿತ್ ಅವರು ಚಾಹಲ್ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿದರು.
 ಡ್ವೇಯ್ನ ಬ್ರಾವೊ 8 ರನ್ ಮತ್ತು ದ್ವಿವೇದಿ 19 ರನ್, ಪ್ರವೀಣ್ ಕುಮಾರ್1ರನ್, ಧವಳ್ ಕುಲಕರ್ಣಿ 10 ರನ್ ಮತ್ತು ಜಕಾತಿ 1 ರನ್ ಗಳಿಸಿದರು.

ಸ್ಕೋರ್ ಪಟ್ಟಿ
 ಗುಜರಾತ್ ಲಯನ್ಸ್ 20 ಓವರ್‌ಗಳಲ್ಲಿ ಆಲೌಟ್ 158

        ಎ.ಫಿಂಚ್ ಸಿ ಗೇಲ್ ಬಿ ಇಕ್ಬಾಲ್04
    ಬಿ.ಮೆಕಲಮ್ ಸಿ ಡಿ ವಿಲಿಯರ್ಸ್‌ ಬಿ ಅಬ್ದುಲ್ಲ01
    ಎಸ್.ರೈನಾ ಸಿ ಅರವಿಂದ್ ಬಿ ವ್ಯಾಟ್ಸನ್ 01
        ಡಿ.ಕಾರ್ತಿಕ್ ಬಿ ಜೊರ್ಡನ್ 26
    ಡ್ವೇಯ್ನ ಸ್ಮಿಟ್ ಸಿ ಕೊಹ್ಲಿ ಬಿ ಚಾಹಲ್ 73
    ಆರ್. ಜಡೇಜ ಸಿ ಗೇಲ್ ಬಿ ವ್ಯಾಟ್ಸನ್ 03
        ಡಿ.ಬ್ರಾವೊ ಬಿ ವ್ಯಾಟ್ಸನ್08
    ಏಕಲವ್ಯ ದ್ವಿವೇದಿ ಸಿ ಕೊಹ್ಲಿ ಬಿ ವ್ಯಾಟನ್19
         ಪಿ.ಕುಮಾರ್ ಬಿ ಜೋರ್ಡನ್ 01
            ಕುಲಕರ್ಣಿ ರನೌಟ್10
            ಜಕಾತಿ ಔಟಾಗದೆ01
                ಇತರೆ11

ವಿಕೆಟ್ ಪತನ: 1-2, 2-6, 3-9,4-94, 5-107, 6-115, 7-145, 8-145, 9-156, 10-158
ಬೌಲಿಂಗ್ ವಿವರ
    ಎಸ್. ಅರವಿಂದ್3-0-13-0
    ಇಕ್ಬಲ್ ಅಬ್ದುಲ್ಲ 4-0-38-2
        ವ್ಯಾಟ್ಸನ್ 4-0-29-4
    ಜೋರ್ಡನ್4-0-26-2
        ಚಾಹಲ್4-0-42-1
        ಬಿನ್ನಿ1-0-04-0

 ರಾಯಲ್ ಚಾಲೆಂಜರ್ಸ್‌ 18.2 ಓವರ್‌ಗಳಲ್ಲಿ 159/6
            ಗೇಲ್ ಬಿ ಕುಲಕರ್ಣಿ09
        ವಿ. ಕೊಹ್ಲಿ ಬಿ ಕುಲಕರ್ಣಿ00
            ಎಬಿಡಿ ವಿಲಿಯರ್ಸ್‌ಔಟಾಗದೆ79
    ಕೆ.ಎಲ್.ರಾಹುಲ್ ಸಿ ಸ್ಮಿತ್ ಬಿ ಕುಲಕರ್ಣಿ00
    ಶೇನ್ ವ್ಯಾಟ್ಸನ್ ಸಿ ಸ್ಮಿತ್ ಬಿ ಜಡೆಜ01
     ಸಚಿನ್ ಬೇಬಿ ಸಿ ಜಕಾತಿ ಬಿ ಕುಲಕರ್ಣಿ 00
    ಸ್ಟುವರ್ಟ್ ಬಿನ್ನಿ ಎಲ್‌ಬಿಡಬ್ಲು ಬಿ ಜಡೇಜ21
        ಇಕ್ಬಾಲ್ ಅಬ್ದುಲ್ಲ ಔಟಾಗದೆ33
                ಇತರೆ16
ವಿಕೆಟ್ ಪತನ: 1-12, 2-25, 3-25, 4-28, 5-29, 6-68
ಬೌಲಿಂಗ್ ವಿವರ
    ಪಿ. ಕುಮಾರ್ 3.2-0-32-0
    ಡಿ.ಎಸ್.ಕುಲಕರ್ಣಿ4.0-1-14-4
    ಆರ್.ಜಡೇಜ4.0-0-21-2
        ಜಕಾತಿ3.0-0-45-0
        ಬ್ರಾವೋ 3.0-0-26-0
    ಡ್ವೇಯ್ನ ಸ್ಮಿತ್1.0-0-14-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News