×
Ad

ಕೇರಳದ 12ನೆ ಮುಖ್ಯ ಮಂತ್ರಿಯಾಗಿ ಪಿಣರಾಯಿ ವಿಜಯನ್ ಪದಗ್ರಹಣ

Update: 2016-05-25 16:25 IST

ತಿರುವನಂತಪುರ, ಮೇ 25: ಕೇರಳದ ನೂತನ ಮುಖ್ಯಮಂತ್ರಿಯಾಗಿ  ಎಡರಂಗ ನಾಯಕ ಪಿಣರಾಯಿ ವಿಜಯನ್‌ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಸೆಂಟ್ರಲ್‌ ಸ್ಟೇಡಿಯಂನಲ್ಲಿ ಇಂದು ಸಂಜೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ  ನ್ಯಾಯಮೂರ್ತಿ  ಪಿ. ಸದಾಶಿವನ್ ಅವರು 72ರ ಹರೆಯದ ಪಿಣರಾಯಿ ವಿಜಯನ್ ಅವರಿಗೆ  ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಕೇರಳದ 12ನೆ ಮುಖ್ಯ ಮಂತ್ರಿಯಾಗಿರುವ  ಪಿಣರಾಯಿ ವಿಜಯನ್‌ ಅವರೊಂದಿಗೆ ಸಚಿವ ಸಂಪುಟದ 18 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಕೇರಳದಲ್ಲಿ ಕಳೆದ ಚುನಾವಣೆಯಲ್ಲಿ ಪಿಣರಾಯಿ ವಿಜಯನ್‌ ನೇತೃತ್ವದ  ಎಲ್‌ಡಿಎಫ್‌ ಪ್ರಚಂಡ ವಿಜಯ ಸಾಧಿಸಿತ್ತು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News