×
Ad

ಸ್ಟಾಲಿನ್ ಬರುವುದು ಗೊತ್ತಿರುತ್ತಿದ್ದರೆ ಮೊದಲ ಸೀಟು ನೀಡುತ್ತಿದ್ದೆ: ಜಯಲಲಿತಾ

Update: 2016-05-25 16:26 IST

ಚೆನ್ನೈ,ಮೇ 25: ಪ್ರಮಾಣ ವಚನ ಸಮಾರಂಭದಲ್ಲಿ ಡಿಎಂಕೆ ನಾಯಕ ಸ್ಟಾಲಿನ್ ಭಾಗವಹಿಸಿರುವುದಕ್ಕೆ ಜಯಲಲಿತಾ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಬರುವುದು ಗೊತ್ತಿರುತ್ತಿದ್ದರೆ ಪ್ರೋಟೊಕಾಲ್‌ನ್ನು ಮೀರಿ ಮುಂದಿನ ಸಾಲಿನ ಆಸನ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದು ಜಯಲಲಿತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಯಲಲಿತಾ ಪ್ರಮಾಣವಚನ ಸಮಾರಂಭದಲ್ಲಿ ಡಿಎಂಕೆಯನ್ನು ಪ್ರತಿನಿಧಿಸಿ ಸ್ಟಾಲಿನ್ ಮತ್ತು ಶಾಸಕರು ಬಂದಿದ್ದರು. ಕಟು ವೈರವನ್ನು ಹೊಂದಿರುವ ಎರಡು ದ್ರಾವಿಡ ಪಾರ್ಟಿಗಳು ಮೃದುವಾಗುವುದರತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಟಾಲಿನ್‌ಗೆ 12ನೆ ಸಾಲಿನ ಸೀಟಿನಲ್ಲಿ ಇತರ ಶಾಸಕರಜೊತೆ ಆಸನ ನೀಡಲಾಗಿತ್ತು. ಪರಿಗಣನೆ ನೀಡದಿರುವುದಕ್ಕಾಗಿ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ತೀಕ್ಷ್ಣವಾಗಿ ಜಯಲಲಿತಾರನ್ನು ಟೀಕಿಸಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು.

ಸೋತಿರುವ ಶರತ್‌ಕುಮಾರ್‌ಗೆ ಒಂದನೆ ಸಾಲಿನಲ್ಲಿ ಆಸನ ನೀಡಲಾಗಿತ್ತು. ಸ್ಟಾಲಿನ್ ಹಿಂದಿನ ಸಾಲಿಗೆ ದಬ್ಬಲ್ಪಟ್ಟಿದ್ದರು. ಆದ್ದರಿಂದ ಸ್ಪಷ್ಟೀಕರಣವನ್ನು ಜಯಲಲಿತಾ ನೀಡಿದ್ದಾರೆ. ಪ್ರೊಟೋಕಾಲ್ ಪ್ರಕಾರ ಶಾಸಕರಿಗೆ ನೀಡಿದ ಆಸನದಲ್ಲಿ ಸ್ಟಾಲಿನ್ ಆಸೀನರಾಗಿದ್ದರು. ಸ್ಟಾಲಿನ್‌ರನ್ನೋ ಅವರ ಪಕ್ಷವನ್ನೋ ಅಪಮಾನಿಸಿಲ್ಲ ಎಂದು ಜಯಲಲಿತಾ ಹೇಳಿದ್ದಾರೆ.

ಡಿಎಂಕೆ -ಅಣ್ಣಾಡಿಎಂಕೆ ನಾಯಕರು ಪರಸ್ಪರ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಆದರೆ, 2001ರಲ್ಲಿ ಚೆನ್ನೈ ಮೇಯರ್ ಆಗಿದ್ದಾಗ ಸ್ಟಾಲಿನ್,ಜಯಲಲಿತಾರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಆನಂತರ ರೂಪುಗೊಂಡ ಸರಕಾರಗಳ ಪ್ರಮಾಣವಚನ ಸಮಾರಂಭಕ್ಕೆ ಪ್ರತಿಪಕ್ಷದಿಂದ ಯಾರೂ ಬಂದಿರಲಿಲ್ಲ. ವ್ಯತ್ಯಸ್ತ ರಾಜಕೀಯವನ್ನು ಪ್ರದರ್ಶಿಸಿದ ಸ್ಟಾಲಿನ್‌ರ ನಿಲುವು ಜನಪ್ರಿಯತೆ ಗಳಿಸಿದೆ. ಹೊಸ ಸರಕಾರ ಪ್ರಮಾಣವಚನ ಸಮಾರಂಭದಲ್ಲಿ ಎಲ್ಲರ ಗಮನಸೆಳೆದದ್ದು ಹನ್ನೆರಡನೆ ಸಾಲಿನಲ್ಲಿ ಕೂತಿದ್ದ ಸ್ಟಾಲಿನ್. ಆಸನ ವಿವಾದ ಕುರಿತು ಪ್ರತಿಕ್ರಿಯಿಸದೆ ಸ್ಟಾಲಿನ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಜಯಲಲಿತಾರನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News