×
Ad

ಪಿಣರಾಯಿ ವಿಜಯನ್ ನೇತ್ರತ್ವದ ಸಚಿವ ಸಂಪುಟಕ್ಕೆ ಶುಭ ಹಾರೈಸಿದ ವಿ.ಎಸ್. ಅಚ್ಯುತಾನಂದನ್

Update: 2016-05-25 16:40 IST

ಕೋಝಿಕ್ಕೋಡ್,ಮೇ 25: ನಿಯೋಜಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್   ಹಾಗೂ ಅವರ ಸಚಿವರಿಗೂ ಶುಭಾಶಯಗಳನ್ನು ಹಿರಿಯ ಸಿಪಿಎಂ ನಾಯಕ ವಿ.ಎಸ್. ಅಚ್ಯುತಾನಂದನ್ ಹಾರೈಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಶ್ರೀಮಂತವಾದ ಒಂದು ಕೇರಳವನ್ನು ಕಟ್ಟಲು ಜನರಪಾಲ್ದಾರಿಕೆಯೊಂದಿಗೆ ಎಲ್‌ಡಿಎಫ್ ಸಚಿವ ಸಂಪುಟಕ್ಕೆ ಸಾಧ್ಯವಾಗಲಿದೆ ಎಂದು ನಿರೀಕ್ಷಿಸುತ್ತೇನೆ. ಸರಕಾರದ ವಿರುದ್ಧ ಬೆದರಿಕೆಯ ಧ್ವನಿಯನ್ನು ಹೊರಡಿಸಿ ಕೆಲವು ಕೇಂದ್ರ ಸಚಿವರು ರಂಗಪ್ರವೇಶಿಸಿದ್ದಾರೆ. ಪ್ರಗತಿಪರ ಸರಕಾರವನ್ನು ಕೆಳಗಿಳಿಸಲು ಏನನ್ನೂ ಮಾಡಲು ಹೇಸದ ಜನರುಇವರು. ನಾವು ಸದಾ ಜಾಗೃತರಾಗಿರಬೇಕಾಗಿದೆ ಎಂದು ವಿ.ಎಸ್. ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಹೀಗೆ ಬರೆದಿದ್ದಾರೆ:

ಅಭಿನಂದನೆಗಳು! ಉತ್ತಮ ಆರಂಭ

ನಿಯೋಜಿತ ಮುಖ್ಯಮಂತ್ರಿ ಕಾಮ್ರೆಡ್ ಪಿಣರಾಯಿ ವಿಜಯನ್‌ರ ಹೊಸ ಸರಕಾರದ ನೀತಿನಿಲುವುಗಳು ಮತ್ತು ಜಾರಿಗೆ ತರಲು ಉದ್ದೇಶಿಸಿರುವ ಕೆಲವು ಕ್ರಮಗಳು ಸ್ಪಷ್ಟವಾಗಿದೆ. ಇವು ಸ್ವಾಗತಾರ್ಹವಾದುದು ಆಗಿವೆ. ಉತ್ತಮ ಆರಂಭವಾಗಿ ನಾನು ಇದನ್ನು ಕಾಣುತ್ತಿದ್ದೇನೆ. ನಿಯೋಜಿತ ಮುಖ್ಯಮಂತ್ರಿ ಕಾಮ್ರೆಡ್ ಪಿಣರಾಯಿ ವಿಜಯನ್‌ರಿಗೂ ಇತರ ನಿಯೋಜಿತ ಸಚಿವರಿಗೂ ನನ್ನ ಅಭಿನಂದನೆಗಳು. ಶ್ರೀಮಂತ ಕೇರಳವನ್ನು ಕಟ್ಟಿಬೆಳೆಸಲು ಪರಿಪೂರ್ಣ ಜನರ ಪಾಲ್ದಾರಿಕೆಯಲ್ಲಿ ಇವರಿಗೆ ಸಾಧ್ಯವಾಗಬಹುದು ಎಂದು ನಾನು ನಿರೀಕ್ಷಿಸುತ್ತೇನೆ. ಈ ನಡುವೆ ಬೆದರಿಕೆಯ ಧ್ವನಿಯನ್ನು ಮೊಳಗಿಸಿ ಕೆಲವು ಕೇಂದ್ರ ಸಚಿವರು ರಂಗಪ್ರವೇಶಿಸಿದ್ದಾರೆ. ಒಂದು ಪ್ರಗತಿಪರ ಸರಕಾರವನ್ನು ಕೆಳಗಿಳಿಸಲು ಏನನ್ನೂ ಮಾಡಲು ಹಿಂಜರಿಯದ ಕೂಟ ಅದು. ನಾವು ಸದಾ ಜಾಗೃತರಾಗಿರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News