ನೆಹರೂ ಕುಟುಂಬದ ಪ್ರತಿಮೆಗಳನ್ನು ಕೆಡವಿದರೆ ಜನರು ಉಗುಳಲಿದ್ದಾರೆ!: ಬಿಜೆಪಿಯ ಜ್ಞಾನದೇವ್ ಅಹುಜ
Update: 2016-05-25 17:35 IST
ಜೈಪುರ, ಮೇ 25: ನೆಹರೂ ಕುಟುಂಬದ ಪ್ರತಿಮೆಗಳನ್ನು ಕೆಡವಿಹಾಕಿದರೆ ಜನರು ಅದಕ್ಕೆ ಉಗುಳಲಿದ್ದಾರೆಂದು ರಾಜಸ್ಥಾನದ ಬಿಜೆಪಿ ಶಾಸಕ ಜ್ಞಾನದೇವ್ ಅಹುಜ ಹೇಳಿದ್ದಾರೆ. ಎಲ್ಲ ಸಾಮಾಜಿಕ ಸಮಸ್ಯೆಗಳಿಗೂ ನೆಹರೂ ಕುಟುಂಬ ಸದಸ್ಯರೇ ಕಾರಣವೆಂದು ಅಹುಜ ಆರೋಪಿಸಿದ್ದಾರೆ. ಜೆಎನ್‌ಯುನಲ್ಲಿ ದಿನಾಲೂ ಅತ್ಯಾಚಾರ ನಡೆಯುತ್ತಿದೆ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ವ್ಯಭಿಚಾರ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಮದ್ಯಪಾನಮಾಡಿ ನಗ್ನರಾಗಿ ನಡೆದಾಡುತ್ತಿದ್ದಾರೆ ಎಂದು ಜ್ಯಾನದೇವ್ ಜೈಪುರದಲ್ಲಿ ಹೇಳಿದ್ದಾರೆ. ಹೇಳಿಕೆ ವಿವಾದವಾಗಿದ್ದು ಸೋಶಿಯಲ್ ಮೀಡಿಯಲ್ಲಿ ತೀಕ್ಷ್ಣ ಟೀಕೆಗಳು ವ್ಯಕ್ತವಾಗಿವೆ. ಈ ಮೊದಲು
ಜೆಎನ್‌ಯು ಕ್ಯಾಂಪಸ್ ಪರಿಸರದಲ್ಲಿ ಸಾವಿರಕ್ಕೂ ಅಧಿಕ ಬಿಯರ್ ಬಾಟ್ಲಿಗಳು, ಕಾಂಡಮ್‌ಗಳು ಪತ್ತೆಯಾಗಿವೆ ಎಂಬ ಅಹುಜರ ಹೇಳಿಕೆ ವಿವಾದವಾಗಿತ್ತು. ಈಗ ಮತ್ತೊಂದು ವಿವಾದದ ಬಾಂಬನ್ನು ಅವರು ಸಿಡಿಸಿದ್ದಾರೆ ಎಂದು ವರದಿಯಾಗಿದೆ.