×
Ad

ವೇಟಿಂಗ್ ಲಿಸ್ಟ್‌ನಲ್ಲಿಯ ಟಿಕೆಟ್ ರದ್ದತಿಗೆ 139ಕ್ಕೆ ಕರೆ ಮಾಡಿ

Update: 2016-05-25 20:39 IST

ಹೊಸದಿಲ್ಲಿ,ಮೇ 25: ಇನ್ನು ಮಂದೆ ರೈಲ್ವೆಯ ವೇಟಿಂಗ್ ಲಿಸ್ಟ್‌ನಲ್ಲಿ ಮತ್ತು ಆರ್‌ಎಸಿ ಟಿಕೆಟ್‌ಗಳನ್ನು ಹೊಂದಿರುವವರು 139 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಅವುಗಳನ್ನು ರದ್ದುಗೊಳಿಸಬಹುದಾಗಿದೆ.

ಈವರೆಗೆ ದೃಢೀಕೃತ ಟಿಕೆಟ್‌ಗಳನ್ನು ಹೊಂದಿರುವವರು ಮಾತ್ರ 139 ಸೇವೆ ಮತ್ತು ಐಆರ್‌ಸಿಟಿಸಿ ಜಾಲತಾಣದ ಮೂಲಕ ತಮ್ಮ ಟಿಕೆಟ್‌ಗಳನ್ನು ರದ್ದುಪಡಿಸಬಹುದಾಗಿತ್ತು. ಇದೀಗ ಈ ಸೌಲಭ್ಯವನ್ನು ಆರ್‌ಎಸಿ ಮತ್ತು ವೇಟಿಂಗ್ ಲಿಸ್ಟ್ ಟಿಕೆಟ್‌ಗಳ ರದ್ದತಿಗೂ ಬಳಸಬಹುದಾಗಿದೆ.

ಬುಧವಾರ ಇಲ್ಲಿ ಆರ್‌ಎಸಿ ಮತ್ತು ವೇಟ್-ಲಿಸ್ಟೆಡ್ ಟಿಕೆಟ್‌ಗಳಿಗಾಗಿ 139 ಸೇವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ರೈಲ್ವೆ ಸಚಿವ ಸುರೇಶ ಪ್ರಭು ಅವರು,ಟಿಕೆಟ್‌ಗಳನ್ನು ಬುಕ್ ಮಾಡುವುದು ಸಮಸ್ಯೆಯಾಗಿದ್ದರೆ,ಬುಕ್‌ಮಾಡಿದ ಟಿಕೆಟ್‌ಗಳನ್ನು ರದ್ದುಗೊಳಿಸುವುದು ಮತ್ತು ಹಣವನ್ನು ವಾಪಸ್ ಪಡೆಯುವುದು ಇನ್ನಷ್ಟು ಸಮಸ್ಯೆಯಾಗಿತ್ತು. ಈಗ ಈ ಸೌಲಭ್ಯಕ್ಕೆ ಚಾಲನೆ ನೀಡುವ ಮೂಲಕ ಟಿಕೆಟ್‌ಗಳ ರದ್ದತಿಯನ್ನು ಸುಲಭಗೊಳಿಸಲಾಗಿದೆ ಎಂದರು.

ಆನ್‌ಲೈನ್‌ನಲ್ಲಿ 139 ಸೇವೆಯ ಮೂಲಕ ದೃಢೀಕೃತ ಟಿಕೆಟ್‌ಗಳನ್ನು ಪ್ರಯಾಣದ ನಿಗದಿತ ಸಮಯದ ನಾಲ್ಕು ಗಂಟೆ ಮೊದಲು ಮಾತ್ರ ರದ್ದು ಮಾಡಲು ಅವಕಾಶವಿದೆ ಮತ್ತು ವೇಟ್-ಲಿಸ್ಟೆಡ್ ಹಾಗೂ ಆರ್‌ಎಸಿ ಟಕೆಟ್‌ಗಳನ್ನು ಪ್ರಯಾಣದ ನಿಗದಿತ ಸಮಯಕ್ಕೆ ಅರ್ಧ ಗಂಟೆ ಇರುವವರೆಗೂ ರದ್ದು ಮಾಡಬಹುದಾಗಿದೆ.

ಜೊತೆಗೆ ಕೌಂಟರ್‌ನಲ್ಲಿಯೂ ಟಿಕೆಟ್‌ಗಳನ್ನು ರದ್ದುಗೊಳಿಸುವ ಸೌಲಭ್ಯವಿರುತ್ತದೆ.

ರೈಲ್ವೆ ಮುಂಗಡ ಪತ್ರದಲ್ಲಿ ಈ ಸೌಲಭ್ಯದ ಭರವಸೆಯನ್ನು ನೀಡಲಾಗಿತ್ತು ಎಂದು ಪ್ರಭು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News