×
Ad

ಯಾರಿಗೆ ಏನು ಬೇಕೋ ಅದನ್ನು ತಿನ್ನಲಿ, ಅದನ್ನು ನಿರ್ಬಂಧಿಸಲು ಅಧಿಕಾರಿಗಳಿಗೆ ಹಕ್ಕಿಲ್ಲ : ಪಿಣರಾಯಿ

Update: 2016-05-25 20:42 IST

ತಿರುವನಂತಪುರಮ್ , ಮೇ 25 : " ನಮ್ಮ ನಾಡಿನಲ್ಲಿ ಯಾರಿಗೆ ಯಾವ ಆಹಾರ ಬೇಕೋ ಅದನ್ನು ತಿನ್ನಲು ಅವರಿಗೆ ಪೂರ್ಣ ಸ್ವಾತಂತ್ರ್ಯ ಇದೆ. ಅದನ್ನು ತಡೆಯುವ ಅಥವಾ ಇಂತಹದ್ದನ್ನೇ ತಿನ್ನಬೇಕು ಎಂದು ಆದೇಶಿಸುವ ಅಧಿಕಾರ ಸರಕಾರೀ ಅಧಿಕರಿಗಳಿಗಿಲ್ಲ. ಅಂತಹದಕ್ಕೆ ನಾವು ಯಾವುದೇ ಅವಕಾಶ ನೀಡುವುದಿಲ್ಲ " ಎಂದು ಕೇರಳದ ನೂತನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. 

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸದ ಮೇಲೆ ತಮ್ಮ ಪ್ರಪ್ರಥಮ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಪಿಣರಾಯಿ ಅವರು ತ್ರಿಶೂರ್ ಪೋಲಿಸ್ ಅಕಾಡೆಮಿಯಲ್ಲಿ ಬೀಫ್ ನಿಷೇಧಿಸಿರುವ ಅಲಿಖಿತ ಕಾನೂನು ಬಂದಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು. 

Courtesy : Media One

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News