ಲೋಕಸಭಾ ಸ್ಪೀಕರ್‌ಗೆ ದುಬಾರಿ ಕಾರು: ಕಾಂಗ್ರೆಸ್ ಕಿರಿಕಿರಿ!
ಹೊಸದಿಲ್ಲಿ, ಮೇ 28: 48.25ಲಕ್ಷ ರೂಪಾಯಿ ಬೆಲೆಯ ದುಬಾರಿ ಜಾಗ್ವಾರ್ ಕಾರನ್ನು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್‌ರಿಗೆ ಖರೀದಿಸಿದ ಕ್ರಮವನ್ನು ಕಾಂಗ್ರೆಸ್ ಟೀಕಿಸಿದೆ. ಸ್ಪೀಕರ್‌ಗಾಗಿ ಲಕ್ಷುರಿ ಕಾರನ್ನು ಖರೀದಿಸಿದ ಕ್ರಮವನ್ನು ಮರುಪರಿಶೀಲಿಸಬೇಕಾಗಿದೆಯೆಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಆಗ್ರಹಿಸಿದ್ದಾರೆ. ದೇಶದ ಮೂರರಲ್ಲಿ ಒಂದು ಭಾಗದಷ್ಟು ಜನರು ಕೃಷಿ ಬಿಕ್ಕಟ್ಟಿಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದುಬಾರಿಕಾರನ್ನು ಖರೀದಿಸುವ ತೀರ್ಮಾನ ವಿವೇಕಯುತವೇ ಎಂದು ಸ್ಪೀಕರ್ ಯೋಚಿಸಬೇಕಾಗಿದೆ ಎಂದು ತಿವಾರಿ ಹೇಳಿದ್ದಾರೆ.
ಸ್ಪೀಕರ್ ಸುಮಿತ್ರ ಮಹಾಜನ್‌ರಿಗಾಗಿ ಸರಕಾರ 48.25 ಲಕ್ಷ ರೂ. ಬೆಲೆಯ ಜಾಗ್ವಾರ್ ಎಕ್ಸ್ ಇ ಪೋರ್ಟ್ ಕಾರನ್ನು ಖರೀದಿಸಿದ್ದು ಸ್ಪೀಕರ್‌ರ ಸುರಕ್ಷಾ ಕಾರಣಗಳಿಗಾಗಿ ಈ ಹೊಸ ಕಾರನ್ನು ಖರೀದಿಸಲಾಗಿದೆ. ಪ್ರಸ್ತುತ ಅವರು ಟೊಯೊಟೊ ಕಾರನ್ನು ಬಳಸುತ್ತಿದ್ದರು. ಭದ್ರತೆಯನ್ನು ಖಚಿತಪಡಿಸುವ ವಾಹನಗಳಲ್ಲಿ ಈಗ ಮಾರುಕಟ್ಟೆಯಲ್ಲಿರುವ ಕಾರುಗಳಲ್ಲಿ ಇದು ಅತಿಕಡಿಮೆ ಬೆಲೆಯಕಾರು ಎಂದು ಪಾರ್ಲಿಮೆಂಟ್ ಕಾರ್ಯದರ್ಶಿ ಡಿ.ಕೆ. ಭಲ್ಲಾ ಪತ್ರಿಕೆಗಳಿಗೆ ತಿಳಿಸಿದ್ದಾರೆ. ಇತರ ನಾಲ್ಕೈದು ಕಾರುಗಳುಪರಿಗಣನೆಯಲ್ಲಿದ್ದವು. ಕಾರು ಖರೀದಿ ಒಂದೇ ದಿನದಲ್ಲಿ ಮಾಡಿದ ತೀರ್ಮಾನವಲ್ಲ, ಭದ್ರತಾ ಸಂಸ್ಥೆಗಳ ಸಲಹೆಯನ್ನು ಪರಿಗಣಿಸಿ ಹೊಸ ಕಾರು ಖರೀದಿಸಲಾಗಿದೆ ಎಂದು ಭಲ್ಲಾ ಹೇಳಿದ್ದಾರೆ.