ಮಹಿಳಾ ಜಿಲ್ಲಾಧಿಕಾರಿಯನ್ನು ಸುಂದರಿ, ಹೀರೋಯಿನ್ ಎಂದು ಕರೆದ ಶಾಸಕ!

Update: 2016-05-28 11:41 GMT

ರಾಯ್‌ಪುರ, ಮೇ 28: ರಾಜಕಾರಣಿಗಳು ಎಲುಬಿಲ್ಲದ ನಾಲಿಗೆಯಲ್ಲಿ ಏನೂ ಹೇಳಬಲ್ಲರು. ಛತ್ತೀಸ್‌ಗಡದ ಸೀತಾಪುರದ ಶಾಸಕ ಅಮರ್‌ಜೀತ್ ಸಿಂಗ್ ಇದಕ್ಕೊಂದು ತಾಜಾ ಉದಾಹರಣೆಯಾಗಬಹುದು. ಮಹಿಳೆಯ ಕುರಿತು ಅವರಿಗೆ ಎಷ್ಟು ವಿರೋಧವಿದೆ ಎಂಬುದನ್ನು ಜನರ ಮುಂದೆ ಅವರು ಆಡಿದ ಮಾತುಗಳೇ ತೋರಿಸುತ್ತಿವೆ.

 ಜನರನ್ನು ಉದ್ದೇಶಿಸಿ ಮಾತಾಡಿದ ಶಾಸಕರು ಇಲ್ಲಿನ ಜಿಲ್ಲಾಧಿಕಾರಿ (ಋತು ಸೇನ್) ಸುಂದರಿ ಮತ್ತು ಹೀರೋಯಿನ್‌ನಂತಿದ್ದಾರೆ. ಅವರು ಯಾರ ಮಾತನ್ನೂ ಕೇಳುವುದಿಲ್ಲ ಎಂದು ಹೀಯಾಳಿಕೆ ಧ್ವನಿಯಲ್ಲಿ ಹೇಳಿದ್ದಲ್ಲದೆ ಸಚಿವ ಕೇದಾರ್ ಕಶ್ಯಪ್‌ರನ್ನು ಹುಚ್ಚನೆಂದೂ ಟೀಕಿಸಿದ್ದಾರೆ. ಈ ಸಂದರ್ಭದಲ್ಲಿ ಗದ್ದಲವಾಗಿದ್ದು ಸರ್‌ಗುಜಾದ ಮಹಿಳಾ ಜಿಲ್ಲಾಧಿಕಾರಿ ಋತುಸೇನ್‌ರ ಹೆಸರನ್ನು ಉಲ್ಲೇಖಿಸಿ ಭಗತ್ ಅಪಮಾನಕಾರಿಯಾಗಿ ಮಾತಾಡಿದ್ದಾರೆ ಎಂದು ಸ್ಥಳದಲ್ಲಿದ್ದ ಉದ್ರಿಕ್ತ ಜನರು ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News