×
Ad

ಮೋದಿ ಸರಕಾರದ ವೈಫಲ್ಯದ ಬಗ್ಗೆ ಕಾಂಗ್ರೆಸ್‌ನಿಂದ ಕಿರು ಹೊತ್ತಗೆ ಬಿಡುಗಡೆ

Update: 2016-05-28 22:49 IST

ಹೊಸದಿಲ್ಲಿ, ಮೇ 28: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಶನಿವಾರ ಕಿರು ಹೊತ್ತಗೆಯೊಂದನ್ನು ಬಿಡುಗಡೆಗೊಳಿಸಿದ್ದು, ಕಳೆದ ಎರಡು ವರ್ಷಗಳು ಭಾರತ ಪಾಲಿಗೆ ಜಡ ಹಾಗೂ ಕರಾಳ ವರ್ಷ ಎಂದು ಅದು ಆರೋಪಿಸಿದೆ. ‘‘ಮೋದಿ ಸರಕಾರದ ವಿಫಲ ಭರವಸೆಗಳು ಹಾಗೂ ಸುಳ್ಳುಗಳ ಎರಡು ವರ್ಷ’’ ಎಂಬ ಶಿರೋನಾಮೆಯ ಈ ಕಿರುಹೊತ್ತಗೆ, ಸರಕಾರದ ಸಾಧನೆಯ ಕುರಿತು ವಾಸ್ತವ ಹಾಗೂ ಅಂಕಿ-ಅಂಶಗಳನ್ನು ಪಟ್ಟಿ ಮಾಡಿದ್ದು, ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ದಿಲ್ಲಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಬಿಜೆಪಿಯ ಸರಕಾರದ 2 ವರ್ಷಗಳನ್ನು ಆಚರಿಸುತ್ತಿದೆ. ಅದರ ಭಾಗಿದಾರ ಪಕ್ಷ ಶಿವಸೇನೆ ಸೇರಿಲ್ಲದ ಕಾರಣ ತಾನು ಬಿಜೆಪಿ ಎನ್ನುತ್ತಿದ್ದೇನೆ. ವಾಸ್ತವವಾಗಿ ಶಿವಸೇನೆಯು ಬಿಜೆಪಿ ಸರಕಾರವನ್ನು ಟೀಕಿಸುತ್ತಿದೆ. ಅತಿ ಮುಖ್ಯವೆಂದರೆ ಬಿಜೆಪಿಯ ಈ ಸಂಭ್ರದಿಂದ ಜನರು ದೂರ ಉಳಿದಿದ್ದಾರೆ ಕಾಂಗ್ರೆಸ್ ಟ್ವೀಟಿಸಿದೆ.
 ಜನರ ಮನಸ್ಸು ಬಿಜೆಪಿ ಕುರಿತಂತೆ ಆಕ್ರೋಶಗೊಂಡಿದೆ. ಅದಕ್ಕೆ ಆರ್ಥಿಕ ವೈಫಲ್ಯ ಮುಖ್ಯ ಕಾರಣ. ಕಡಿಮೆ ಇಂಧನ ಬೆಲೆಯಿಂದಾಗಿ ಸಿಪಿಐ (ಗ್ರಾಹಕ ಬೆಲೆ ಸೂಚಿ)ಕಳೆದ ಜೂ.14ಕ್ಕೆ ಶೇ.6.7ಇದ್ದುದು ಜು.15ಕ್ಕೆ ಶೇ.3.5ಕ್ಕೆ ಇಳಿದಿತ್ತು. ಅದು 2016ರ ಎಪ್ರಿಲ್‌ನ ಬಳಿಕ ಶೇ.5.4ಕ್ಕೇರಿದೆಯೆಂದು ಚಿದಂಬರಂ ಹೇಳಿದರು.
ಆರ್ಥಿಕ ದೃಢತೆಗೆ ಮರಳುವ ಹೊರತಾಗಿಯೂ 2017-18ರಲ್ಲಿ ಶೇ.3 ಆರ್ಥಿಕ ಕೊರತೆಯನ್ನು ಸಾಧಿಸುವ ಸರಕಾರದ ಬದ್ಧತೆಯ ಕುರಿತು ಅವರು ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ದೇಶಾದ್ಯಂತದ ಕಾಲೇಜ್ ಕ್ಯಾಂಪಸ್‌ಗಳಲ್ಲಿ ನಡೆದ ಮುಷ್ಕರಗಳನ್ನುಲೇಖಿಸಿದ ಚಿದಂಬರಂ, ವಿಶ್ವವಿದ್ಯಾನಿಲಯಗಳ ಪದವೀಧರರು ಎದುರಿಸುತ್ತಿರುವ ಪೇಲವ ಭವಿಷ್ಯ ಇದಕ್ಕೆ ಭಾಗಶಃ ಕಾರಣ. ಕೋಟ್ಯಂತರ ಜನರು 8-10 ವರ್ಷಗಳ ಶಾಲಾ ಶಿಕ್ಷಣವನ್ನು ಮುಗಿಸಿರುತ್ತಾರೆ. ಅವರಿಗೆ ಉದ್ಯೋಗವೆಲ್ಲಿದೆ? ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರಕಾರ ಗಮನಾರ್ಹವಾಗಿ ವಿಫಲವಾಗಿದೆಯೆಂದು ಚಿದಂಬರಂ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News