×
Ad

ಕೇಂದ್ರ ಸರಕಾರದ ಯೋಜನೆಗಳು ವಾಸ್ತವದಿಂದ ಬಲು ದೂರ

Update: 2016-05-29 14:15 IST

ಹೊಸದಿಲ್ಲಿ, ಮೇ 29: ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತರು ಮೋದಿ ಸರಕಾರದ ಎರಡನೆ ವರ್ಷಾಚರಣೆಯ ನಿಜ ಬಣ್ಣವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯಯ ಎದುರು ಬಹಿರಂಗಪಡಿಸಿದ್ದಾರೆಂದು ವರದಿಯಾಗಿದೆ.

ಉತ್ತರ ಪ್ರದೇಶದಲ್ಲಿ ಸರಕಾರ ರಚಿಸುವ ಕನಸು ಕಾಣುತ್ತಿರುವ ಬಿಜೆಪಿಗೆ ಗೊರಕ್‌ಪುರದಲ್ಲಿ ತನ್ನದೇ ಕಾರ್ಯಕರ್ತರು ಇರಿಸುಮುರಿಸು ಸ್ಥಿತಿಯನ್ನು ನಿರ್ಮಿಸಿದ್ದರು. ಸ್ಮೃತಿ ಇರಾನಿ ಮುಂದೆ ಮೋದಿ ಸರಕಾರದ ಗುಟ್ಟನ್ನು ಬಿಡಿಸಿಟ್ಟಾಗ ತಬ್ಬಿಬ್ಬಾಗುವ ಪರಿಸ್ಥಿತಿಯನ್ನು ಸ್ಮೃತಿ ಎದುರಿಸಬೇಕಾಯಿತು. ಗೊರಕ್ ಪುರದಲ್ಲಿ ಬಿಜೆಪಿ ಕಾರ್ಯಕರ್ತರು ಕೇಂದ್ರ ಸಚಿವೆ ಇರಾನಿಯ ಎದುರು ಸರಕಾರದಯೋಜನೆಗಳು ವಾಸ್ತವದಿಂದ ಮೈಲಿಗಟ್ಟಲೆ ದೂರದಲ್ಲಿದೆ ಎಂದು ದೂರಿದ್ದಾರೆ. ಅಮರ್ ಉಜಾಲ ಪತ್ರಿಕೆ ವರದಿ ಮಾಡಿರುವ ಪ್ರಕಾರ ಗೊರಕ್‌ಪುರದ ಬಿಜೆಪಿ ಕಾರ್ಯಕರ್ತರು ಮೋದಿ ಸರಕಾರದ ಸಾಲಸೌಲಭ್ಯ ಮತ್ತು ಅನಿಲ ಸಬ್ಸಿಡಿ ನೈಜಫಲಾನುಭವಿಗಳಿಗೆ ಸಿಗುವುದಿಲ್ಲ ಎಂದು ಆರೋಪಿಸಿದ್ದಾರೆ.

ಕಾರ್ಯಕರ್ತರ ತೀಕ್ಷ್ಣ ಪ್ರಶ್ನೆಗಳನ್ನೆದುರಿಸಬೇಕಾಗಿ ಬಂದಾಗ ಸ್ಮೃತಿ ಇರಾನಿ ಒಂದು ವೇಳೆ ಇದು ನಿಜವಾಗಿದ್ದರೆ ಈಬಗ್ಗೆ ತನಿಖೆ ನಡೆಸಲಾಗುವುದು ಎಂದು ಉತ್ತರಿಸಿದ್ದಾರೆ.

ಕೇಂದ್ರ ಸರಕಾರದ ಸಚಿವರು ದೇಶದ ಮೂಲೆಮೂಲೆಗೆ ಹೋಗಿ ಮೋದಿ ಸರಕಾರದ ಬಗ್ಗೆ ಈಗ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಗೊರಕಪುರದಲ್ಲಿ ಎದುರಾದ ಕಹಿ ಘಟನೆ ಮೋದಿ ಸರಕಾರಕ್ಕೆ ಬಹುದೊಟ್ಟ ಪಾಠವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News