×
Ad

ಸಾಮಾಜಿಕ ಕಾರ್ಯಕರ್ತ ಜೋಮೋನ್ ವಿರುದ್ಧ ತಾನು ದೂರು ನೀಡಿಲ್ಲ!: ಜಿಶಾ ತಂದೆ

Update: 2016-05-29 15:53 IST

ಪೆರುಂಬಾವೂರ್, ಮೇ 29: ಸಾರ್ವಜನಿಕ ಕಾರ್ಯಕರ್ತ ಜೋಮೋನ್ ಪುತ್ತನ್‌ಪುರಕ್ಕಲ್ ವಿರುದ್ಧ ತನ್ನ ತಿಳುವಳಿಕೆಯೊಂದಿಗೆ ದೂರು ನೀಡಿಲ್ಲ ಎಂದು ಜಿಶಾ ತಂದೆ ಪಾಪ್ಪು ಹೇಳಿದ್ದಾರೆ. ಕಾಂಗ್ರೆಸ್‌ನ ವಾರ್ಡ್ ಮೆಂಬರ್ ಸುನಿಲ್ ಮತ್ತು ಪೊಲೀಸ್ ವಿನೋದ್ ಸೇರಿ ಸರಕಾರದಿಂದ ಧನಸಹಾಯ ಸಿಗಲಿಕ್ಕೆ ಅರ್ಜಿ ಎಂದು ತಿಳಿಸಿ ಒಂದು ಸಾವಿರ ರೂಪಾಯಿ ತನಗೆ ಕೊಟ್ಟು ಬಿಳಿ ಕಾಗದಕ್ಕೆ ಸಹಿಹಾಕಿಸಿದ್ದರು ಎಂದು ಪಾಪ್ಪು ಹೇಳಿದ್ದಾರೆ.

ಪುತ್ರಿಯ ಮೇಲೆ ಆರೋಪ ಹೊರಿಸಿದ ಜೋಮೋನ್ ವಿರುದ್ಧ ವಾಪ್ಪು ನೀಡಿದ್ದೆನ್ನಲಾದ ದೂರಿನ ಪ್ರಕಾರ ಪೊಲೀಸರು ಜೋಮೋನ್ ಪುತ್ತನ್‌ಪುರಕ್ಕಲ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ವಿರೋಧಿ ಆಕ್ರಮ ತಡೆ ಕಾನೂನು ಪ್ರಕಾರ ಜಾಮೀನು ರಹಿತ ಆರೋಪ ಹೊರಿಸಿದ್ದಾರೆ. ಜಿಶಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯುಡಿಎಫ್ ಸಂಚಾಲಕ ಪಿಪಿ ತಂಗಚ್ಚನ್‌ರ ತನ್ನ ವಿರುದ್ಧ ಜೋಮೋನ್ ಹೊರಿಸಿದ ಆರೋಪಗಳ ಕುರಿತು ತನಿಖೆನಡೆಸಬೇಕೆಂದು ಸ್ವತಃ ತಂಗಚ್ಚನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ದೂರುಸಲ್ಲಿಸಿ ಆಗ್ರಹಿಸಿದ್ದರು. ತನ್ನ ಮತ್ತು ಕುಟುಂದ ಮೇಲೆ ಜೋಮೋನ್ ನಡೆಸುತ್ತಿರುವ ಅಪಪ್ರಚಾರ ಪ್ರಕರಣವನ್ನು ಬುಡಮೇಲುಗೊಳಿಸುವ ಕುಪ್ರಯತ್ನವಾಗಿದ್ದು ಜೋಮೋನ್ ಆರೋಪಗಳ ಕುರಿತು ತನಿಖೆ ನಡೆಸಬೇಕೆಂದು ತಂಗಚ್ಚನ್ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News