ಮುಸ್ತಫ ರಾಜಾರೊಂದಿಗೆ ಪ್ರಿಯಾಮಣಿ ನಿಶ್ಚಿತಾರ್ಥ
Update: 2016-05-29 17:27 IST
ಚೆನ್ನೈ, ಮೇ 29: ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಮಣಿ ತಮ್ಮ ದೀರ್ಘಕಾಲದ ಗೆಳೆಯ ಮುಸ್ತಫ ರಾಜಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
‘‘ಮೇ 27, ಶುಕ್ರವಾರದಂದು ತನ್ನ ನಿವಾಸದಲ್ಲಿ ನಡೆದ ಸರಳ ಹಾಗೂ ಖಾಸಗಿ ಕಾರ್ಯಕ್ರಮದಲ್ಲಿ ಮುಸ್ತಫ ರಾಜಾರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆಂದು ಬಹಿರಂಗಪಡಿಸಲು ನನಗೆ ಸಂತೋಷವಾಗುತ್ತಿದೆ’’ ಎಂದು ಟ್ವೀಟರ್ ಪೇಜ್‌ನಲ್ಲಿ ರವಿವಾರ ಪ್ರಿಯಾಮಣಿ ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಐಪಿಎಲ್ ಪಂದ್ಯದ ವೇಳೆ ಪ್ರಿಯಾಮಣಿ ಅವರು ಮುಸ್ತಫರನ್ನು ಮೊದಲ ಬಾರಿ ಭೇಟಿಯಾಗಿದ್ದರು. ಆ ಬಳಿಕ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು. ಇದೀಗ ಅವರು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮುಸ್ತಫ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯ ಮೂಲಕ ಐಪಿಎಲ್‌ನೊಂದಿಗೆ ನಂಟು ಹೊಂದಿದ್ದರು. ಪ್ರಿಯಾಮಣಿ ಪ್ರಸ್ತುತ ‘ದನ ಕಾಯೋನು’ ಹೆಸರಿನ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.