×
Ad

ಕರಾಚಿ: ಏಳರ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ

Update: 2016-05-29 23:01 IST

ಕರಾಚಿ, ಮೇ 29: ಆಘಾತಕಾರಿ ಘಟನೆಯೊಂದರಲ್ಲಿ, ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಬಳಿಕ ಆಕೆಯನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು ಮನೆಯ ತಾರಸಿಯಿಂದ ಕೆಳಗೆ ಎಸೆಯಲಾಗಿದೆ.

   ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಆಕೆಯ ಮೇಲೆ ಲೈಂಗಿಕ ಆಕ್ರಮಣ ನಡೆದಿರುವುದನ್ನು ದೃಢಪಡಿಸಿದ್ದಾರೆ. ಆಕೆಯ ತಲೆಯಲ್ಲಿ ಗಂಭೀರವಾದ ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿರುವುದಾಗಿ ಜಿನ್ನಾ ಆಸ್ಪತ್ರೆಯ ವೈದ್ಯಕೀಯ ಕಾನೂನು ಅಧಿಕಾರಿ ಸೀಮಿ ಜಮಾಲಿ ತಿಳಿಸಿದ್ದಾರೆ.

 ಜಿನ್ನಾ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯಕೀಯ ಕಾನೂನು ಅಧಿಕಾರಿ ಇಲ್ಲದಿರುವುದರಿಂದ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕರಾಚಿಯ ಸಿವಿಲ್ ಆಸ್ಪತ್ರೆಯಲ್ಲಿ ನಡೆಸಲಾಯಿತೆಂದು ಅವರು ಹೇಳಿದ್ದಾರೆ.

 ಮೃತ ಬಾಲಕಿಯ ಕುಟುಂಬಿಕರು ಹಾಗೂ ಬಂಧುಗಳು ಆಕೆಯ ಮೃತದೇಹದ ತಪಾಸಣೆಯನ್ನು ನಡೆಸಲು ಯಾಕೆ ನಿರಾಕರಿಸುತ್ತಿದ್ದಾರೆಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಕಾನೂನು ಅಧಿಕಾರಿ ಮುಬಾರಕ್ ಪಠಾಣ್ ತಿಳಿಸಿದ್ದಾರೆ.ಬಾಲಕಿಯು ಆಟವಾಡುತ್ತಿದ್ದಾಗ ಮನೆಯ ತಾರಸಿಯಿಂದ ಬಿದ್ದು ಮೃತಪಟ್ಟಳೆಂದು ಕುಟುಂಬಿಕರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದೆಂದು ಘಟನೆ ನಡೆದ ಕೈಗಾರಿಕಾ ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯ ಉಸ್ತುವಾರಿ ಇನ್ಸ್‌ಪೆಕ್ಟರ್ ಅಸ್ಮಾತುಲ್ಲಾ ಮರ್‌ವಾತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News