×
Ad

ಚುನಾವಣೆಯಲ್ಲಿ ಹಿಲರಿಗೆ ಒಬಾಮರೇ ಶ್ರೀರಕ್ಷೆ: ವರದಿ

Update: 2016-05-30 23:48 IST

ವಾಶಿಂಗ್ಟನ್, ಮೇ 30: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಹಿಲರಿ ಕ್ಲಿಂಟನ್‌ರ ಪ್ರಚಾರದಲ್ಲಿ ಅಧ್ಯಕ್ಷ ಬರಾಕ್ ಒಬಾಮ ವರದಾನವಾಗಬಲ್ಲರು ಎಂದು ವರದಿಯೊಂದು ರವಿವಾರ ಹೇಳಿದೆ. ಎಂಟು ವರ್ಷಗಳ ಅಧ್ಯಕ್ಷೀಯ ಅವಧಿಯ ಕೊನೆಯಲ್ಲೂ ಒಬಾಮ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ.ಹಿಲರಿಯ ಹಿಂದೆ ಪಕ್ಷವನ್ನು ಒಗ್ಗೂಡಿಸಲು ಒಬಾಮಗಿಂತ ಸಮರ್ಥ ವ್ಯಕ್ತಿ ಇನ್ನೊಬ್ಬರಿಲ್ಲ. ಡೆಮಾಕ್ರಟಿಕ್ ಪಕ್ಷದ ನೆಲೆಯಲ್ಲಿ ಒಬಾಮ ತನ್ನ ಅಗಾಧ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಯುವಜನರು ಸೇರಿದಂತೆ ಹಲವು ಗುಂಪುಗಳಲ್ಲಿ ಅವರು ತನ್ನ ಪ್ರಭಾವವನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News