×
Ad

ಬಿಜೆಪಿ ಸಂಸದ,ಉ.ಪ್ರ.ಸಚಿವರ ವಿರುದ್ಧ ಬಂಧನ ವಾರಂಟ್‌ಗೆ ನ್ಯಾಯಾಲಯದ ತಡೆ

Update: 2016-06-01 22:04 IST

ಬದೋಹಿ, ಜೂ.1: 2009ರ ಲೋಕಸಭಾ ಚುನಾವಣೆಯ ಸಂದರ್ಭ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬಿಜೆಪಿ ಸಂಸದ ಮನೋಜ ತಿವಾರಿ,ಉ.ಪ್ರದೇಶದ ಸಂಪುಟ ಸಚಿವರಾದ ಶಿವಪಾಲ್ ಯಾದವ್ ಮತ್ತು ಪಾರಸನಾಥ ಯಾದವ್, ಎಸ್‌ಪಿ ಶಾಸಕ ಜಾಹಿದ್ ಬೇಗ್ ಮತ್ತು ಎಸ್‌ಪಿ ಜಿಲ್ಲಾಧ್ಯಕ್ಷ ಆರಿಫ್ ಸಿದ್ದಿಕಿ ಅವರ ವಿರುದ್ಧದ ಜಾಮೀನು ರಹಿತ ಬಂಧನ ವಾರಂಟ್‌ಗೆ ಜಿಲ್ಲಾ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.

ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲು ತಪ್ಪಿದ್ದಕ್ಕಾಗಿ ಆಗ ಎಸ್‌ಪಿಯ ತಾರಾ ಪ್ರಚಾರಕರಾಗಿದ್ದ ತಿವಾರಿ,ಯಾದವದ್ವಯರು ಮತ್ತು ಇತರ ಇಬ್ಬರ ವಿರುದ್ಧ ಈ ವಾರಂಟ್‌ನ್ನು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಸತ್ಯವಾನ ಸಿಂಗ್ ಅವರು ಮೇ 21ರಂದು ಹೊರಡಿಸಿದ್ದು,ಆರೋಪಿಗಳನ್ನು ಜೂ.14ರಂದು ನ್ಯಾಯಾಲಯದಲ್ಲಿ ಹಾಜರು ಪಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಆದೇಶಿಸಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News