×
Ad

ಈ 13 ಪುಟ್ಟ ಹವ್ಯಾಸಗಳಿಂದ ನಿಮಗೆ ಖುಷಿ ಖಚಿತ

Update: 2016-06-02 12:29 IST

ವಾಣಿಜ್ಯ ಕಚೇರಿಗಳ ನಡುವೆ ಏಕತಾನತೆಯ ಬದುಕಿನಿಂದ ರೋಸಿ ಹೋಗಿದೆಯೆ? ಹಾಗಿದ್ದರೆ ಈ ಸಣ್ಣಪುಟ್ಟ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಬದಲಾವಣೆ ಸಿಗಲಿದೆ.

ನಿದ್ದೆ ಅತೀ ಮುಖ್ಯ:

ಸರಿಯಾಗಿ ನಿದ್ದೆ ಮಾಡುವುದು ಜೀವನದಲ್ಲಿ ಅದ್ಭುತ ಆನಂದ ಕೊಡಲಿದೆ. ಮಾನವ ದೇಹಕ್ಕೆ 8 ಗಂಟೆ ನಿದ್ದೆ ಅತೀ ಅಗತ್ಯ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಿದ್ರಾರಾಹಿತ್ಯವು ಒತ್ತಡ ಮತ್ತು ಖಿನ್ನತೆಗೆ ಕಾರಣವಾಗಲಿದೆ. ಬಿಸಿನೀರು ಸ್ನಾನ: ದೇಹಕ್ಕೆ ರಿಲ್ಯಾಕ್ಸ್ ಕೊಡಲು ಇದು ಅತ್ಯುತ್ತಮ ವಿಧಾನ. ಇದು ನಿಮ್ಮ ಚಿಂತೆಯನ್ನೆಲ್ಲ ತಾತ್ಕಾಲಿಕವಾಗಿ ನಿವಾರಿಸುತ್ತದೆ ಮತ್ತು ಉತ್ತಮ ಚಿಂತನಾಸರಣಿ ತರುತ್ತದೆ.

ಸ್ವಲ್ಪ ಸಮಯ ತೆಗೆದುಕೊಳ್ಳಿ:

ಪ್ರತೀದಿನ ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ನೀವು ಈ ಸಮಯದಲ್ಲಿ ನಡೆದಾಡಿ, ಮೂಲೆಯಲ್ಲಿ ಮೌನವಾಗಿ ಕುಳಿತುಕೊಳ್ಳಿ ಅಥವಾ ಮಧ್ಯಾಹ್ನದ ಊಟ ಅಥವಾ ಕಾಫಿಗಾಗಿ ಬಿಡುವಾಗಿ. ಇದೆಲ್ಲ ಸ್ವಯಂ ವಿಶ್ಲೇಷಣೆಗೆ ನೆರವಾಗುತ್ತದೆ.

ಬರೆಯಿರಿ:

ಏನು ಬೇಕೋ ಅದೆಲ್ಲ ಬರೆಯಿರಿ. ಕೋಪ ಹೊರ ಹಾಕಲು ಬರವಣಿಗೆ ಉತ್ತಮ ಹಾದಿ ಎಂದು ಅಧ್ಯಯನಗಳು ಹೇಳಿವೆ. ನಿಮ್ಮ ಜೀವನದ ಉತ್ತಮ ವಿಷಯಗಳ ಬಗ್ಗೆ ಅದರಲ್ಲಿ ಬರೆದು ಇಡಬಹುದು. ಆ ಡೈರಿಯನ್ನು ಮತ್ತೊಮ್ಮೆ ಓದುವುದು ನಿಮಗೇ ಖುಷಿ ಕೊಡುವಂತೆ ಬರೆಯಬೇಕು.

ಮೇಣದ ಬತ್ತಿ ಬೆಳಗಿಸಿ:

ನಿಮ್ಮ ಮನೆಯ ಬೆಳಕನ್ನೆಲ್ಲ ಆರಿಸಿ ಮೇಣದಬತ್ತಿಯ ಅಡಿಯಲ್ಲಿ ಸ್ವಲ್ಪ ಶಾಂತವಾಗಿ ರಿಲ್ಯಾಕ್ಸ್ ಮಾಡಿ.

ಅಪ್ಪಿಕೊಳ್ಳಿ:

ನಿಮಗೆ ಇಷ್ಟವಾದವರನ್ನು ಅಪ್ಪಿಕೊಂಡು ನಿಮ್ಮ ಮೆಚ್ಚುಗೆ ತೋರಿಸಿ. ಮತ್ತೊಂದು ಚರ್ಮದ ಜೊತೆಗೆ ಸಂಪರ್ಕವಾದಾಗ ಆಕ್ಸಿಟೊಸಿನ್ ಬಿಡುಗಡೆಯಾಗಿ ಮೂಡ್ ಉತ್ತಮವಾಗುತ್ತದೆ.

ನಡೆದಾಡಿ:

ನಿಮ್ಮ ಕಚೇರಿ ಅಥವಾ ಮನೆಯ ಸುತ್ತ ಅತ್ತಿತ್ತ ನಡೆದಾಡಿ. ನಡೆಯುವುದರಿಂದ ಶಕ್ತಿ ಬರುತ್ತದೆ. ಮನಸ್ಸು ಇನ್ನಷ್ಟು ಉತ್ತಮವಾಗಿ ಯೋಚಿಸುತ್ತದೆ. ಕೆಲಸದಲ್ಲಿ ಬೋರಾಗುತ್ತಿದ್ದಲ್ಲಿ ಇದನ್ನು ಮಾಡಬಹುದು.

 ನೀರು ಕುಡಿಯಿರಿ:

ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ನೀರು ನಿಮ್ಮ ದೇಹಕ್ಕೆ ಬೇಕು.

ಹೂಗಳನ್ನು ಖರೀದಿಸಿ:

ನಿಮಗಾಗಿ ನೀವೇ ಹೂಗಳನ್ನು ಖರೀದಿಸುವುದು ಸಕಾರಾತ್ಮಕತೆ ಮೂಡಿಸುತ್ತದೆ.

ನಿಮ್ಮ ಕೋಣೆ ಸ್ವಚ್ಛ ಮಾಡಿ:

ಸ್ವಚ್ಛ ಮಾಡುವಾಗ ಸಿಗುವ ರಿಲ್ಯಾಕ್ಸ್ ಅನುಭವ ನಿಮಗೇ ಅಚ್ಚರಿ ತರಬಹುದು. ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಸ್ವಚ್ಛ ಮಾಡುವುದು ನಿಮ್ಮ ಮನಸ್ಸಿಗೆ ನೆರವಾಗಿ ಅನಗತ್ಯ ಚಿಂತೆಗಳನ್ನು ದೂರ ಮಾಡುತ್ತದೆ.

ಹಳೇ ಪ್ರಿಯ ಸಿನಿಮಾ ನೋಡಿ:

ಸಿನಿಮಾವನ್ನು ಮತ್ತೆ ನೋಡುವುದು ಅಥವಾ ದೃಶ್ಯಗಳನ್ನು ಮರಳಿ ನೋಡುವುದು ನಿಮ್ಮ ಮನಸ್ಸನ್ನು ಉಲ್ಲಾಸದಿಂದ ಇರುವಂತೆ ಮಾಡಲಿದೆ.

ನಿಮ್ಮ ಸುತ್ತಮುತ್ತಲು ಹಿತಕರವಾಗಿರಲಿ:

ಅಂದದ ಬೆಡ್ ಶೀಟ್ ಖರೀದಿಸಿ. ನಿಮಗಾಗಿ ಓದುವ ಜಾಗ ಮಾಡಿ. ನಿಮಗಾಗಿ ನೀವೇ ಕೊಟ್ಟುಕೊಳ್ಳುವ ಉತ್ತಮ ಉಡುಗೊರೆ ಇದು.

ಎಲ್ಲವನ್ನೂ ಹಳದಿಯಾಗಿಸಿ:

ಹಳದಿ ಸೂರ್ಯ ಉದಯಿಸುವ ಬಣ್ಣ. ಹೊಸ ಆರಂಭ ಮತ್ತು ತಾಜಾತನ. ನಿಮ್ಮ ಮೂಲೆ ಮೂಲೆಗಳಿಗೆ ಹಳದಿ ಬಣ್ಣ ಕೊಡಿ. ಹಳದಿ ಟೆಡ್ಡಿ ಖರೀದಿಸಿ.

ಮಕ್ಕಳ ಪುಸ್ತಕ ಓದಿ:

ಮಕ್ಕಳ ಪುಸ್ತಕವನ್ನು ಮರಳಿ ಓದುವುದು ಖುಷಿಕೊಡಲಿದೆ. ನಿಮ್ಮ ಬಾಲ್ಯದ ನೆನಪಾಗಿ ಖುಷಿಯಾಗಲಿದೆ.

ಕೃಪೆ: www.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News