2017ರ ಉಪ ಚುನಾವಣೆಯಲ್ಲಿ ಆರೆಸೆಸ್ಸ್ ಮುಖ್ಯ ಪಾತ್ರ ನಿರ್ವಹಸಲಿದೆ: ಬಿಜೆಪಿ
ಲಕ್ನೊ ಜೂನ್,2: 2017ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ದಾಳ ಉರುಳಿಸಲಿದೆ.ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ವಿವಿಧ ಸಮುದಾಯಗಳ ನಾಲ್ಕೈದು ನಾಯಕರನ್ನು ಚುನಾವಣಾ ಪ್ರಚಾರಕ್ಕೆ ಪ್ರಧಾನವಾಗಿ ಇಳಿಸಲಿದೆ. ಪಕ್ಷದ ಮೂಲಗಳ ಪ್ರಕಾರ ಆರೆಸ್ಸೆಸ್ ಮತ್ತು ಅದರ ಸಹಯೋಗಿ ಸಂಘಟನೆಗಳು ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿವೆ. ಉತ್ತರ ಪ್ರದೇಶದ ಚುನಾವಣಾ ಪ್ರಚಾರವನ್ನು ಬಿಜೆಪಿಯು ಅವಧ್, ಕಾನ್‌ಪುರ,ಗೊರಕ್‌ಪುರ, ಬ್ರಜ್ ಹಾಗೂ ಪಶ್ಚಿಮ ಎಂದು ತನ್ನೊಳಗೆ ಹಂಚಿಕೊಂಡಿದೆ. ಪ್ರತಿಯೊಂದು ಕ್ಷೇತ್ರದ ಅಧ್ಯಕ್ಷರಾಗಿ ಆರೆಸ್ಸೆಸ್ ಹಿನ್ನೆಲೆಯ ಬಿಜೆಪಿ ನಾಯಕರು ಇರಲಿದ್ದಾರೆ. ಇದಲ್ಲದೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೇವಲ ಸಂಘದವರಾಗಿರುತ್ತಾರೆ ಹಾಗೂ ಅವರು ಚುನಾವಣಾ ಪ್ರಚಾರದ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮುಂದೆ ನಿಲ್ಲಿಸಲು ಬಯಸುವವರಲ್ಲಿ ಕೇಂದ್ರ ಸಚಿವ ಸಂಜೀವ್ ಬಲಿಯಾನ್(ಜಾಟ್),ಮನೋಜ್ ಸಿನ್ಹಾ(ಭೂಮಿಹಾರ್),ರಾಮ್‌ಶಂಕರ್ ಕಠೋರಿಯಾ (ರಾಜ್ಯದ ದಲಿತ ಮುಖ),ಮತ್ತು ಸಹಯೋಗಿ ಪಕ್ಷ ಅಪ್ನಾದಳದ ನಾಯಕ ಅನುಪ್ರಿಯ ಪಟೇಲ್(ಕುರ್ಮಿ) ಹೆಸರು ಇವೆ. ಯುವನಾಯಕ ವರುಣ್ ಗಾಂದಿಯ ಹೆಸರು ಚರ್ಚೆಯಲ್ಲಿದೆ.ಅವರು ಯುವಕರಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ.
ಆರೆಸ್ಸೆಸ್ ರಾಜ್ಯದ ಚುನಾವಣೆಯ ಹೊಣೆಯನ್ನು ಶಿವಪ್ರಕಾಶ್‌ರಿಗೆ ವಹಿಸಿದೆ. ಪಶ್ಚಿಮಬಂಗಾಳದಂತಹ ಚಮತ್ಕಾರವನ್ನು ಇಲ್ಲಿ ಅವರಿಂದ ಬಿಜೆಪಿ ಬಯಸುತ್ತಿದೆ. ಪಕ್ಷದ ಆರೆಸ್ಸೆಸ್‌ನ ಜನರು ಬೂತ್ ಮಟ್ಟದಲ್ಲಿಯೂ ಕೆಲಸ ಮಾಡಲಿದ್ದಾರೆ. ಬಿಜೆಪಿ ತನ್ನ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಘೋಷಣೆಯನ್ನು ಎತ್ತಿಹಿಡಿಯಲಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.