ಸೆಲ್ಫಿ ಗೀಳು ಎಲ್ಲಿಯವರೆಗೆ ?

Update: 2016-06-02 09:54 GMT

ಗೋಕರ್ಣ : ಯುವಜನತೆಂಲ್ಲಿ ಸೆಲ್ಫಿ ತೆಗೆಯುವ ಗೀಳು ಅದೆಷ್ಟು ಮಟ್ಟಿಗೆ ಬೆಳೆದಿದೆಯೆಂದರೆ ಅದು ಈಗಾಗಲೇ ಹಲವು ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇಂತಹುದೇ ಇನ್ನೊಂದು ದುರ್ಘಟನೆಯಲ್ಲಿಗೋಕರ್ಣ ಬೀಚಿನಲ್ಲಿರುವ 300 ಅಡಿ ಎತ್ತರದ ಲೈಟ್ ಹೌಸಿನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಜಾರಿ ನೀರಿಗೆ ಬಿದ್ದು ರಾಜಸ್ತಾನದ 21 ವರ್ಷದ ಕಾನೂನು ವಿದ್ಯಾರ್ಥಿನಿ ದಾರುಣ ಅಂತ್ಯ ಕಂಡಿದ್ದಾಳೆ.

ಮೃತ ವಿದ್ಯಾರ್ಥಿನಿಯನ್ನು 21 ವರ್ಷದಪ್ರಣೀತಾ ಮೆಹ್ತಾ ಎಂದು ಗುರುತಿಸಲಾಗಿದೆ. ಜೋಧ್ ಪುರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ತನ್ನ ಸಹಪಾಠಿಗಳೊಂದಿಗೆಪ್ರಣೀತ ಗೋಕರ್ಣ ಬೀಚಿಗೆ ಬಂದಿದ್ದಾಗ ಈ ದುರ್ಘನೆ ಸಂಭವಿಸಿದೆ. ಆಕೆಯ ಜತೆಗಿದ್ದವರು ಸ್ಥಳೀಯ ಮೀನುಗಾರರಲ್ಲಿ ಸಹಾಯಕ್ಕಾಗಿ ಅಂಗಲಾಚಿದರೂ ಅದಾಗಲೇ ಬಹಳ ತಡವಾಗಿತ್ತು. ಪ್ರಣೀತಾಳನ್ನು ನೀರಿನಿಂದ ಮೇಲಕ್ಕೆತ್ತುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.

ಆಕೆ ಮತ್ತು ಆಕೆಯ ಕಾಲೇಜು ಸಹಪಾಠಿಗಳಯ ಮುಂಬೈ, ಗೋವಾ ಸಂದರ್ಶಿಸಿದ ನಂತರ ಗೋಕರ್ಣಕ್ಕೆ ಆಗಮಿಸಿದ್ದರು. ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿದವರ ಸಂಖ್ಯೆ ಕಳೆದ ವರ್ಷ ಭಾರತದಲ್ಲಿ 27 ಆಗಿತ್ತಲ್ಲದೆ ವಿಶ್ವದಲ್ಲೇ ಅತ್ಯಂತ ಹೆಚ್ಚು ಸೆಲ್ಫಿ ಸಾವುಗಳು ಭಾರತದಲ್ಲಿ ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News